ಹೊಸಕೋಟೆ: ಸಹ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಭವನದಲ್ಲಿ ಅ.7 ರಂದು ದಸರಾ ಸಾಂಸ್ಕೃತಿಕ ಉತ್ಸವ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ದೇವರಾಜ್ ತಿಳಿಸಿದರು.

ಬೆಳಗ್ಗೆ 10ಕ್ಕೆ ನಡೆಯುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಲಿದ್ದಾರೆ. ಬಳಿಕ 10.30ಕ್ಕೆ ವರಸಿದ್ಧಿ ವಿನಾಯಕ ಕೋಲಾಟ ತಂಡದಿಂದ ಕೋಲಾಟ, 11 ಗಂಟೆಗೆ ‘ಕುರುಕ್ಷೇತ್ರ’ ಅಥವಾ ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ ನಡೆಯಲಿದೆ. ಯಕ್ಷಗಾನ ಹರಿಕಥಾ ಕಲಾವಿದರಾದ ಮೈಲಾಪುರ ಮುನಿರಾಜು ಮತ್ತು ಎಂ ಹೊಸಹಳ್ಳಿ ರಾಮೇಗೌಡರಿಗೆ ‘ಯಕ್ಷಗಾನ ಕಥಾಕಿಂಕರ’ ಪ್ರಶಸ್ತಿ ಪ್ರದಾನ ಸಮಾಂಭ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ನಟರಾಜ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಮುಖ್ಯ ಸಲಹೆಗಾರ ಮುನಿರಾಜ ಭಾಗವತ, ಖಜಾಂಚಿ ಈಶ್ವರ್ ರಾವ್, ನಿರ್ದೇಶಕ ಮಂಜುನಾಥ, ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.