ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಸಹಕಾರ ಸಂಘ ಸಿಇಒಗಳಿಗೆ ತರಬೇತಿ

Published : 12 ಆಗಸ್ಟ್ 2024, 16:01 IST
Last Updated : 12 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ಸಹಕಾರ ಸಂಘಗಳು ಅಭಿವೃದ್ಧಿ ಹೊಂದುವಲ್ಲಿ ಸಂಘದ ಮುಖ್ಯಸ್ಥರು, ಕಾರ್ಯನಿರ್ವಹಣ ಅಧಿಕಾರಿಯ ಕಾರ್ಯಧ್ಯಕ್ಷತೆ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ತರಬೇತಿ ಶಿಬಿರ ನಡೆಸಲಾಗುತ್ತಿದೆ ಎಂದು ಬಮೂಲ್‌ ನಿರ್ದೇಶಕ ಬಿ.ಸಿ.ಆನಂದಕುಮಾರ್ ಹೇಳಿದರು.

ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಉತ್ತಮ ಸಂಬಂಧ ಕಾಯ್ದುಕೊಳ್ಳಬೇಕು. ಸಹಕಾರ ಕಾಯ್ದೆ, ಕಾನೂನನ್ನು ಅರಿತುಕೊಳ್ಳಬೇಕು. ಸಂಘದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆಯ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಸುಗಮವಾಗಿ ಮುನ್ನಡೆಸುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ಪ್ರಗತಿಪರ ಕೃಷಿಕ ತಿ.ರಂಗರಾಜು ಮಾತನಾಡಿ, ರಾಜ್ಯ ಸಹಕಾರ ಮಹಾಮಂಡಳದಿಂದ ಸಹಕಾರ ಸಂಘ ಸಂಸ್ಥೆಗಳ ಸಿಬ್ಬಂದಿಗೆ ತಜ್ಞರಿಂದ ತರಬೇತಿ ಕೊಡಿಸುವುದು ಅಗತ್ಯವಾಗಿದೆ. ಇದರಿಂದ ಸಂಘದ ಚುನಾಯಿತ ಸದಸ್ಯರು ಸುಗಮವಾಗಿ ಆಡಳಿತ ನಡೆಸುವ ತಿಳುವಳಿಕೆ ಬರಲಿದೆ. ಹಾಗೆಯೇ ಸಿಬ್ಬಂದಿಗೂ ಸಹಕಾರ ಸಂಘದ ಹೊಸ ಕಾನೂನುಗಳ ಅರಿವು ಮೂಡಲಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ನಾಗರಾಜು ಮಾತನಾಡಿ, ಇತ್ತೀಚೆಗೆ ಸಹಕಾರ ಸಂಘಗಳ ಕಾಯ್ದೆಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇದರಿಂದ ಸಹಕಾರ ಸಂಘಗಳು ಹಲವು ಸಮಸ್ಯೆ ಎದುರಿಸುತ್ತಿವೆ. ಇದನ್ನು ಪರಿಹರಿಸಬೇಕು ಮತ್ತು ಈ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಲು ತರಬೇತಿ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಟಿ.ಶ್ರೀನಿವಾಸಮೂರ್ತಿ, ಟಿಎಪಿಎಂಸಿಎಸ್ ನಿರ್ದೇಶಕ ಟಿ.ಸಿದ್ದರಾಮಣ್ಣ, ಜಿಲ್ಲಾ ಸಹಕಾರ ಇಲಾಖೆ ಉಪ ನಿಬಂಧಕ ಚಂದ್ರಶೇಖರ್, ತಾಲ್ಲೂಕು ಸಹಕಾರ ಇಲಾಖೆ ಅಧಿಕಾರಿ ರಾಮಾಂಜನೇಯ, ಉಪನ್ಯಾಸಕ ಜಗದೀಶ್,ಎಪಿಎಂಸಿಎಸ್ ನೌಕರರ ಸಂಘದ ಅಧ್ಯಕ್ಷ ರವೀಂದ್ರಕುಮಾರ್,ಉಪಾಧ್ಯಕ್ಷ ಎಂ.ದೇವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT