ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಹಳೇ ಮಧುಗಿರಿ ರಸ್ತೆ ಕಬಳಿಕೆಗೆ ಹುನ್ನಾರ

Published 2 ಜನವರಿ 2024, 16:11 IST
Last Updated 2 ಜನವರಿ 2024, 16:11 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ಹಳೇ ಮಧುಗಿರಿ ರಸ್ತೆಯ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಕೆ.ಪರಮೇಶ, ನಗರಸಭೆ ಸದಸ್ಯ ನಾಗರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌, ನಗರಸಭೆ ಪರಿಸರ ವಿಭಾಗದ ಎಂಜಿನಿಯರ್‌ ಈರಣ್ಣ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನಗರಸಭೆ ವ್ಯಾಪ್ತಿಯ ಮುತ್ತೂರಿನ ಸರ್ವೇ ನಂಬರ್ 41 ಮತ್ತು 42ರ ಶ್ರೀನಗರ ಮೂಲಕ ಹಾದು ಹೋಗುತ್ತಿದ್ದ ಹಳೆ ಮಧುಗಿರಿ ರಸ್ತೆ ಈಗ ತನ್ನ ಸ್ವರೂಪವನ್ನು ಕಳೆದುಕೊಂಡಿದೆ. ಈ ರಸ್ತೆಗೆ ಬದಲಾಗಿ ದಶಕಗಳಷ್ಟು ಹಿಂದೆಯೇ ಬೇರೆ ರಸ್ತೆ ನಿರ್ಮಾಣವಾಗಿದೆ. ಆದರೆ ರಸ್ತೆಯ ಸ್ಥಳ ಮಾತ್ರ ಇಂದಿಗೂ ಹಾಗೆಯೇ ಉಳಿದಿದೆ. ಈ ಸ್ಥಳದಲ್ಲಿ ನಗರಸಭೆ ವತಿಯಿಂದ ಉದ್ಯಾನವ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅತ್ಯಂತ ಆಯಕಟ್ಟಿನ ಜನವಸತಿ ಸ್ಥಳದಲ್ಲಿರುವ ರಸ್ತೆಯ ಖಾಲಿ ಜಾಗವನ್ನು ಬಲಾಡ್ಯರು ಕಬಳಿಸಲು ಹುನ್ನಾರ ನಡೆಸಿದ್ದಾರೆ. ಉದ್ಯಾನ ನಿರ್ಮಿಸುವಂತೆ ಈ ಹಿಂದೆ ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಯಾವ ಪ್ರಯೋಜನೆ ಆಗಿಲ್ಲ ಎಂದು ಹೇಳಿದರು.

ಹಳೇ ಮಧುಗಿರಿ ರಸ್ತೆಯ ಸುತ್ತಮುತ್ತಲು ದೊಡ್ಡ ಪ್ರಮಾಣದಲ್ಲಿ ಜನವಸತಿ ಪ್ರದೇಶ ಬೆಳೆದಿದೆ. ಆದರೆ ಈ ಭಾಗದಲ್ಲಿ ಎಲ್ಲೂ ಸಹ ಒಂದೂ ಸಾರ್ವಜನಿಕ ಉದ್ಯಾನ ಇಲ್ಲದಾಗಿದೆ. ಹೀಗಾಗಿ ಉಳ್ಳವರು ಈ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳುವ ಮುನ್ನ ನಗರಸಭೆ ವತಿಯಿಂದ ಪಾರ್ಕ್‌ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT