ಬಂದೋಬಸ್ತ್
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ 19 ಮತಗಟ್ಟೆಗಳಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ಒಬ್ಬರು ಇನ್‌ಸ್ಪೆಕ್ಟರ್, ಮೂರು ಜನ ಸಬ್ ಇನ್‌ಸ್ಪೆಕ್ಟರ್, ಮೂರು ಜನ ಕ್ಲಸ್ಟರ್ ಬೂತ್‌ಗಳಿಗೆ ತಲಾ ಒಬ್ಬರು ಸಹಾಯಕ ಸಬ್ ಇನ್‌ಸ್ಪೆಕ್ಟರ್, 40 ಜನ ಪೊಲೀಸ್ ಸಿಬ್ಬಂದಿ, ಎರಡು ಗಸ್ತು ವಾಹನಗಳು, 8 ಪ್ರಮುಖ ಸ್ಥಳಗಳಲ್ಲಿ ಗಸ್ತುಗಳನ್ನು ಮಾಡಲಾಗಿದೆ ಎಂದು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ತಿಳಿಸಿದ್ದಾರೆ.