ದೊಡ್ಡಬಳ್ಳಾಪುರ: ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಶೀರ್ಷಿಕೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಜುಲೈ 1ರಿಂದಲೇ ವಿಶೇಷ ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿದೆ.

ಈ ಅಭಿಯಾನವು ಅ.7ರವರೆಗೆ ನಡೆಯಲಿದೆ. ಪ್ರಕರಣದ ಇತ್ಯರ್ಥ ಶೀಘ್ರವೇ ಆಗುವುದರ ಜೊತೆಗೆ, ಎದುರಾಳಿ ಪಕ್ಷದ ಇಬ್ಬರಿಗೂ ಗೆಲವಿನ ಸಮಾಧಾನ ಸಿಗಲು ಈ ಅಭಿಯಾನ ನೆರವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ತಾಲ್ಲೂಕು ಸದಸ್ಯ ಕಾರ್ಯದರ್ಶಿ ದಾಸರಿ ಕ್ರಾಂತಿ ಕಿರಣ್ ಹೇಳಿದರು.

ನಗರದ ನ್ಯಾಯಾಲಯದ ತಾಲ್ಲೂಕು ವಕೀಲರ ಸಂಘದ ಕಾರ್ಯಾಲಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಧ್ಯಸ್ಥಿಕೆಯು ನ್ಯಾಯಾಲಯಗಳಲ್ಲಿ ನಡೆಯುವ ಪ್ರಕ್ರಿಯೆಗಳಿಗಿಂತ ಭಿನ್ನವಾಗಿರಲಿದೆ. ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣಗಳಲ್ಲಿ ವಕೀಲರು ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷಿಗಳು, ದಾಖಲೆಗಳನ್ನು ಪರಿಗಣಿಸಲಾಗುತ್ತದೆ. ಆದರೆ, ಮಧ್ಯಸ್ಥಿಕೆ ಅಭಿಯಾನದಲ್ಲಿ ಪ್ರಕರಣಕ್ಕೆ ಸಂಬಂಧಪಡದ, ಕಾನೂನು ಸೇವೆಗಳ ಪ್ರಾಧಿಕಾರದಿಂದ ತರಬೇತಿ ಪಡೆದ ಅಧಿಕೃತ ವ್ಯಕ್ತಿಯು ಮಧ್ಯಸ್ಥಿಕೆ ವಹಿಸಲಿದ್ದಾರೆ. ಅವರು ಕಾನೂನು ಹಾಗೂ ಪ್ರಕರಣಗಳ ವಿಚಾರದಲ್ಲಿ ಪರಿಣಿತಿ ಹೊಂದಿರುತ್ತಾರೆ ಎಂದರು.

ಇವರು ಪಕ್ಷದಾರರ ಮಧ್ಯಸ್ಥಿಕೆ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣ ಇತ್ಯರ್ಥಗೊಳಿಸಲು ಸೂಚಿಸುತ್ತಾರೆ. 60 ದಿನಗಳ ಕಾಲಾವಕಾಶದಲ್ಲಿ ಇಬ್ಬರೂ ಪಕ್ಷಗಾರರು ಒಪ್ಪಿದ್ದಲ್ಲಿ ಈ ಪ್ರಕರಣ ಸುಲಭವಾಗಿ ಇರ್ಥವಾಗಿ, ಶೀಘ್ರ ನ್ಯಾಯ ದೊರೆಯುತ್ತದೆ ಎಂದರು.

ಕಡಿಮೆ ಅವಧಿ, ಕಡಿಮೆ ಖರ್ಚಿನಲ್ಲಿ ನ್ಯಾಯ ದೊರೆಯಲಿದ್ದು, ಇಬ್ಬರೂ ಪಕ್ಷಗಾರರು ಗೆಲ್ಲುವ ಅವಕಾಶವಿದೆ. ಮಧ್ಯಸ್ಥಿಕೆದಾರನು ವಿವಾದವಿರುವ ಇಬ್ಬರು ಪಕ್ಷಗಾರರ ಮೇಲೆ ತನ್ನ ನಿರ್ಧಾರ ಹೇರುವುದಿಲ್ಲ ಮತ್ತು ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಒತ್ತಾಯಪಡಿಸುವುದಿಲ್ಲ ಎಂದರು.

ತಾಲ್ಲೂಕಿನಲ್ಲಿ ಈವರೆಗೆ 43 ಪ್ರಕರಣಗಳು ವಿಶೇಷ ಮಧ್ಯಸ್ಥಿಕೆಗೆ ಬಂದಿದ್ದು, ಈವರೆಗೆ 15 ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ ಮಾತನಾಡಿ, ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವದಲ್ಲಿ ನಮ್ಮ ಹಕ್ಕು ಬಾಧ್ಯತೆಗಳ ಉಳಿವಿಗಾಗಿ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಸೇವೆಗಳನ್ನು ನೀಡುತ್ತಿದೆ. ಈ ದಿಸೆಯಲ್ಲಿ ವಿಶೇಷ ಮಧ್ಯಸ್ಥಿಕೆ ಅಭಿಯಾನ ರಾಷ್ಟ್ರವ್ಯಾಪ್ತಿ ನಡೆಯುತ್ತಿದೆ. ನ್ಯಾಯಾಲಯದಲ್ಲಿ ವಕೀಲರಂತೆ ಪ್ರಜೆಗಳ ಪಾತ್ರವೂ ಮುಖ್ಯ ಎಂದರು.

ಪತ್ರಿಕಾಗೋಷ್ಟಿಯಲ್ಲಿ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು ಹಾಗೂ ಪದಾಧಿಕಾರಿಗಳು ಇದ್ದರು.

ಯಾವ ಪ್ರಕರಣಗಳು ಅರ್ಹ

* ವೈವಾಹಿಕ ಪ್ರಕರಣಗಳು

* ಕೌಟಂಬಿಕ ದೌರ್ಜನ್ಯದ ಪ್ರಕರಣಗಳು

* ಚೆಕ್ ಅಮಾನ್ಯದ ಪ್ರಕರಣಗಳು

* ವಾಣಿಜ್ಯ ಪ್ರಕರಣಗಳು

* ನೌಕರರ ಸೇವಾ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳು

*ರಾಜೀ ಆಗಬಹುದಾದ ಅಪರಾಧ ಪ್ರಕರಣಗಳು

* ಗ್ರಾಹಕರ ಪರಿಹಾರದ ಪ್ರಕರಣಗಳು

* ಸಾಲ ವಸೂಲಾತಿ ಪ್ರಕರಣಗಳು

* ಪಾಲು ವಿಭಾಗ ಪ್ರಕರಣಗಳು

* ಮನೆ ಬಾಡಿಗೆ ಅಥವಾ ಬಾಡಿಗೆದಾರನನ್ನು ಹೊರಹಾಕುವಿಕೆಗೆ ಸಂಬಂಧಿಸಿದ ಪ್ರಕರಣಗಳು

* ಭೂಸ್ವಾಧೀನ ಪ್ರಕರಣಗಳು

* ಮೋಟಾರು ಅಪಘಾತ ಪರಿಹಾರದ ಪ್ರಕರಣಗಳು

* ಕಾರ್ಮಿಕ ವಿವಾದಗಳು ಇತರ ಸಿವಿಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.