ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಸಾಯನಿಕ ಮುಕ್ತ ಆಹಾರ ಸೇವಿಸಿ’

ಹ್ಯಾಡ್ಯಾಳ ಗ್ರಾಮದಲ್ಲಿ ಪೌಷ್ಠಿಕ ಆಹಾರ ಮೇಳ
Last Updated 4 ಜುಲೈ 2019, 13:41 IST
ಅಕ್ಷರ ಗಾತ್ರ

ವಿಜಯಪುರ: ರಾಸಾಯನಿಕ ಔಷಧಿಗಳು ಮತ್ತು ಗೊಬ್ಬರ ಬಳಕೆ ಮಾಡಿ ಬೆಳೆದಿರುವ ಆಹಾರ ಪದಾರ್ಥಗಳಿಗಿಂತ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಆಹಾರ ಸೇವನೆ ಮಾಡುವುದರಿಂದ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತದೆ ಎಂದು ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ವಿಶ್ವೇಶ್ವರಾಯ ಹೇಳಿದರು.

ಸಮೀಪದ ಹ್ಯಾಡ್ಯಾಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ‘ಪೌಷ್ಟಿಕ ಆಹಾರ ಮೇಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರೋಗ್ಯ ರಕ್ಷಣೆಗಾಗಿ ಸುತ್ತಮುತ್ತಲಿನಲ್ಲಿ ಸಿಗುವಂತಹ ರಾಸಾಯನಿಕ ಮುಕ್ತವಾದ ಆಹಾರಗಳನ್ನು ಸೇವಿಸುವುದರ ಬದಲಿಗೆ ನಾವು ಆಸ್ಪತ್ರೆಗಳಲ್ಲಿ ಕೊಡುವಂತಹ ಔಷಧೋಪಚಾರಗಳಿಗೆ ಹೊಂದಿಕೊಂಡು ಬಿಟ್ಟಿದ್ದೇವೆ. ಇದರ ಪರಿಣಾಮವಾಗಿ ಹೆಚ್ಚಾಗಬೇಕಾಗಿದ್ದ ಶಾಲೆಗಳಿಗಿಂತ ಆಸ್ಪತ್ರೆಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ’ ಎಂದು ವಿಷಾದಿಸಿದರು.

‘ಪೌಷ್ಟಿಕ ಆಹಾರ ಸೇವನೆ ಎಲ್ಲರ ಅಗತ್ಯತೆ‌. ಪ್ರತಿಯೊಬ್ಬರು ಆರೋಗ್ಯದಿಂದ ಇರಲು, ರೋಗಗಳನ್ನು ತಡೆಗಟ್ಟಲು ಜೀವನದಲ್ಲಿ ಪ್ರಗತಿ ಸಾಧಿಸಲು ಇಂತಹ ಆಹಾರದ ಅಗತ್ಯತೆ ಬಹಳವಾಗಿದೆ. ಗರ್ಭಿಣಿ ಮಹಿಳೆಯು ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಗರ್ಭದಲ್ಲಿನ ಶಿಶುಗಳ ಬೆಳವಣಿಗೆಗೂ ಗಮನಕೊಡಬೇಕು’ ಎಂದರು.

ಹ್ಯಾಡ್ಯಾಳ ಶಾಲೆಯ ಮುಖ್ಯಶಿಕ್ಷಕ ಪೈಗಂಬರ್ ವಾಲೇಕರ್ ವಾಲೇಕರ್ ಮಾತನಾಡಿ, ‘ತಾಯಂದಿರು ತಮ್ಮ ಮಕ್ಕಳಿಗೆ ಜಂಕ್‌ಪುಡ್‌ಗಳನ್ನೆ ಪೌಷ್ಟಿಕ ಆಹಾರವೆಂದು ತಪ್ಪು ಕಲ್ಪನೆಯಿಂದ ನೀಡುತ್ತಿದ್ದಾರೆ. ಅವರಲ್ಲಿ ಪೌಷ್ಟಿಕ ಆಹಾರಗಳ ಕುರಿತಾದ ಅರಿವಿನ ಕೊರತೆಯನ್ನು ನೀಗಿಸುವಂತಹ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡಬೇಕಾಗಿದೆ’ ಎಂದು ಸಲಹೆ ನೀಡಿದರು.

‘1982ರಲ್ಲಿ ಕೇಂದ್ರ ಸರ್ಕಾರ ಪೌಷ್ಠಿಕ ಆಹಾರ ದಿನಾಚರಣೆ ಜಾರಿಗೆ ತಂದ ನಂತರ ತಾಯಿ ಮತ್ತು ಶಿಶು ಮರಣದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರಲ್ಲಿ ಆರೋಗ್ಯ ಇಲಾಖೆಯವರ ಪ್ರಾಮಾಣಿಕವಾದ ಸೇವೆಯು ಸೇರಿದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಸಂಯೋಜಕಿ ಅಕ್ಷತಾ ರೈ ಮಾತನಾಡಿ, ‘ಆರೋಗ್ಯವೇ ಭಾಗ್ಯ. ಆದರೆ ಇಂದು ರಸಗೊಬ್ಬರ ಬಳಸಿ ಬೆಳೆದಿರುವ ಸತ್ವ ರಹಿತ ಆಹಾರ ತಿಂದು ರೋಗ ನಿರೋಧಕ ಶಕ್ತಿ ಇಲ್ಲದಂತಾಗಿದೆ’ ಎಂದರು.

ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ, ಹಾಲು ನೀಡುತ್ತಿದ್ದರೂ ಪೋಷಕಾಂಶದ ಕೊರತೆ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ ಎಂದರು.

ಸ್ವಸಹಾಯ ಸಂಘ ಮಹಿಳಾ ಪದಾಧಿಕಾರಿಗಳು 21 ತರಹದ ಆಹಾರಗಳನ್ನು ಸಿದ್ಧಪಡಿಸಿಕೊಂಡು ಬಂದು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದರು.

ಡೇರಿ ಅಧ್ಯಕ್ಷ ಅಶ್ವಥ್, ಆಸ್ಪತ್ರೆಯ ಸಿಬ್ಬಂದಿ ಶ್ರುತಿ, ಪೊಲೀಸ್ ಇಲಾಖೆಯ ಶ್ರೀನಿವಾಸ್, ಹರೀಶ್, ಧರ್ಮಸ್ಥಳ ಸಂಘದ ಸಮನ್ವಯಾಧಿಕಾರಿ ಶರ್ಮಿಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT