ಶನಿವಾರ, ಜುಲೈ 31, 2021
27 °C

ದೊಡ್ಡಬಳ್ಳಾಪುರ: ಒಂದೇ ದಿನ 8 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿ ಹಾಗೂ ಗ್ರಾಮಾಂತರ ಪ್ರದೇಶ ಸೇರಿ ಒಂದೇ ದಿನ ಹೊಸದಾಗಿ 8 ಜನರಲ್ಲಿ ಕೋವಿಡ್‌-19 ದೃಢಪಟ್ಟಿದೆ.

ನಗರದ ಕಲ್ಲುಪೇಟೆ, ವಿನಾಯಕನಗರ, ರಾಜೀವ್‌ಗಾಂಧಿ ಬಡಾವಣೆ, ಕುಚ್ಚಪ್ಪನಪೇಟೆ, ದೇಶದ ಪೇಟೆ ಕ್ರಾಸ್‌ ಹಾಗೂ ನಗರದ ಹೊರವಲಯದ ಕೊಡಿಗೇಹಳ್ಳಿ ಗ್ರಾಮ ಸೇರಿ 8 ಜನರಿಗೆ ಕೊರೊನಾ ವೈರಸ್‌ ಸೋಂಕು ಹರಡಿದೆ ಎಂದು ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಿಗೇಹಳ್ಳಿ ಗ್ರಾಮದ ನಿವಾಸಿಯೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಕೋವಿಡ್‌-19 ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಹಾಗೆಯೇ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್‌-19 ದೃಢಪಟ್ಟಿರುವ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯ‌ ಎಂದು ಘೋಷಣೆ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪಕರ್ದಲ್ಲಿದ್ದವರ ಮಾಹಿತಿ ಪಡೆಯಲಾಗುತ್ತಿದೆ.

ಸೋಂಕಿತರಲ್ಲಿ ನೇಕಾರರೆ ಹೆಚ್ಚು: ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್‌-19 ದೃಢಪಟ್ಟಿರುವ ಎಲ್ಲರು ಸಹ ನೇಕಾರಿಕೆ ಉದ್ಯಮದ ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿರುವವರೇ ಹೆಚ್ಚಾಗಿದ್ದಾರೆ. ಸೀರೆ ಮಾರಾಟಕ್ಕೆ, ರೇಷ್ಮೆ ನೂಲು ತರುವ ಸಲುವಾಗಿ ಬೆಂಗಳೂರು ಹಾಗೂ ಹಿಂದೂಪುರದ ಕಡೆಗೆ ಹೋಗಿ ಬಂದಿರುವವರೇ ಆಗಿದ್ದಾರೆ. ಹೀಗಾಗಿ ನೇಕಾರಿಕೆ ನಿಮಿತ್ತ ಪ್ರತಿ ನಿತ್ಯ ಬೇರೆ ನಗರಗಳಿಗೆ ಹೋಗಿ ಬರುತ್ತಿದ್ದವರು ಮುಂಜಾಗೃತೆಯಾಗಿ ಗಂಟಲ ದ್ರವ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ಇಲಾಖೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು