ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂ ಸ್ವಾಧೀನ ವಿರೋಧಿಸಿ ಪಂಜಿನ ಮೆರವಣಿಗೆಯಲ್ಲಿ ರೈತ ಆಕ್ರೋಶ

ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ
Published : 9 ಆಗಸ್ಟ್ 2024, 15:44 IST
Last Updated : 9 ಆಗಸ್ಟ್ 2024, 15:44 IST
ಫಾಲೋ ಮಾಡಿ
Comments

ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನಗೊಳ್ಳಿಸುತ್ತಿರುವುದನ್ನು ವಿರೋಧಿಸಿ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.

ಕಳೆದ 858 ದಿನಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಸರ್ಕಾರವೂ ಹ್ಯಾಡಾಳ ಮತ್ತು ಗೋಖರೆ ಬಚ್ಚಹಳ್ಳಿ ಗ್ರಾಮದ ಕೃಷಿ ಭೂಮಿಯನ್ನು ನೋಟಿಫಿಕೇಶನ್‌ ಮಾಡಿರುವುದನ್ನು ವಿರೋಧಿಸಿ ಇಲ್ಲಿನ ರೈತರು ಪಂಜಿನ ಮೆರವಣಿಗೆ ನಡೆಸಿದರು.

ಕಾರ್ಪೋರೆಟ್‌ ಕಂಪನಿಗಳಿಗೆ ಫಲವತ್ತಾದ ಕೃಷಿ ಭೂಮಿ ನೀಡಿದರೆ ಅನ್ನದಾರು ಇಂದು ಹಚ್ಚಿರುವ ಬೆಂಕಿಯಲ್ಲಿ ಸುಟ್ಟು ಹೋಗಬೇಕಾಗುತ್ತದೆ ಎಂದು ಹೋರಾಟ ನಿರತರು ಎಚ್ಚರಿಕೆ ನೀಡಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಗಸ್ಟ್‌ 9ರಂದು ನಡೆದ ಕ್ವಿಟ್‌ ಇಂಡಿಯಾ ಚಳವಳಿಯೇ ಈ ಮೆರವಣಿಗೆಗೆ ಸ್ಫೂರ್ತಿಯಾಗಿದ್ದು, ಅನ್ನ ನೀಡುವ ಭೂಮಿಯನ್ನು ಕಸಿಯಲು ಬಂದವರು ಇದೇ ಭೂಮಿಯ ಒಡಲು ಸೇರಬೇಕಾಗುತ್ತದೆ ಎಂದು ರೈತರು ತಿಳಿಸಿದರು.

ಇಲ್ಲಿನ ಒಂದು ಕಲ್ಲು ಅಲುಗಾಡಿಸಲು ಮುಂದಾದರೂ, ಅವರೆಲ್ಲಾ ಭೂ ತಾಯಿಯ ಒಡಲನ್ನು ಸೇರಬೇಕಾಗುತ್ತದೆ. ನಮ್ಮ ಪ್ರಾಣದ ಜೊತೆಗೆ ಅವರ ಪ್ರಾಣವನ್ನು ತೆಗೆದುಕೊಂಡು ರಕ್ತದಿಂದ ತಾಯಿಗೆ ಅಭಿಷೇಕ ಮಾಡಿ ಭೂಮಿಯನ್ನು ಪವಿತ್ರ ಮಾಡುತ್ತೇವೆ ಎಂದು ಮೆರವಣಿಗೆಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದರು.

ಸುದೀರ್ಘ ಹೋರಾಟವನ್ನು ಅಲ್ಲೆಗೆಲ್ಲೆಯುವ ಆಳುವ ವರ್ಗಕ್ಕೆ ರೈತರ ತಾಳ್ಮೆಯ ಕಟ್ಟೆ ಹೊಡೆದು ಹೋದರೆ ಏನು ಆಗುತ್ತದೆ ಎಂಬುದನ್ನು ಇತಿಹಾಸವೇ ತಿಳಿಸಿದೆ. ಇದನ್ನು ಅರಿತು ಭೂ ಸ್ವಾಧೀನಗೊಂಡಿರುವ ಭೂಮಿಯನ್ನು ಕೈಬಿಡಬೇಕು ಒಂದು ಹಕ್ಕೋತ್ತಾಯ ಮಾಡಿದರು.

ಇದೇ ವೇಳೆ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಹ್ಯಾಡಾಳ, ಗೋಖರೆ ಬಚ್ಚಹಳ್ಳಿಯ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT