ದೇವನಹಳ್ಳಿ: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಪ್ರದೇಶಕ್ಕೆ ಬೃಹತ್ ಬಲೂನ್ವೊಂದು ಗಾಳಿಯಲ್ಲಿ ಹಾರಿ ಬಂದಿದೆ. ಫೆ.5ರಂದು ಈ ಘಟನೆ ನಡೆದಿದೆ.

ವಿಮಾನಗಳ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ನಡೆಯುವ ರನ್ವೇ ಪ್ರದೇಶಕ್ಕೆ ಬೃಹತ್ ಗಾತ್ರದ ಬಲೂನ್ ಹಾರಿ ಬಂದಿದೆ. ಆ ಸಮಯದಲ್ಲಿ ವಿಮಾನಗಳ ಹಾರಾಟ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಡಿ ಕನ್ಸಟ್ರಕ್ಷನ್ ಕಂಪನಿಗೆ ಈ ಬಲೂನ್ ಸೇರಿದೆ. ಅದರ ದಾರ ಕಟ್ ಆಗಿ ರನ್ವೇ ಕಡೆಗೆ ಹಾರಿ ಬಂದಿರುವ ಸಾಧ್ಯತೆ ಇದೆ. ಈ ಸಂಬಂಧ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಿಸಿಡಿ ಕನ್ಸಟ್ರಕ್ಷನ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಇಂತಹ ನಿರ್ಲಕ್ಷ್ಯ ಅಪಾಯಕಾರಿ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.