ಹೊಸಕೋಟೆ: ಆಸರಾ ಸ್ಕಾಲರ್ಶಿಫ್ ಆಯ್ಕೆಯಾದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 122 ಪದವಿ ವಿದ್ಯಾರ್ಥಿನಿಯರಿಗೆ ತಲಾ ₹5,000 ನಂತೆ ಆಸರಾ ಸ್ಕಾಲರ್ಶಿಫ್ ಗರ್ಲ್ಸ್ ಅಲ್ಯೂಮಿನಿಯಂ ಟ್ರಸ್ಟ್ ₹6.10 ಲಕ್ಷದ ಚೆಕ್ ವಿತರಣೆ ಮಾಡಲಾಯಿತು.

‘ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ಈಗಿರುವ ಸೌಲಭ್ಯಗಳು ಇರಲಿಲ್ಲ. ಅಂತಹ ಕಷ್ಟದ ಸಂದರ್ಭದಲ್ಲೂ ಓದಿ ಒಂದು ಹಂತದ ಸ್ಥಾನಮಾನ ಸಿಕ್ಕಿದೆ. ನಮ್ಮ ಕಷ್ಟದ ದಿನಗಳು ನಮಗೆ ಕಲಿಸಿದ ಪಾಠಗಳೇ ನಮ್ಮ ಕೈ ಹಿಡಿದಿವೆ. ವಿದ್ಯಾರ್ಥಿನಿಯರು ಸಂಕಷ್ಟಗಳನ್ನು ಮೀರಿ ಓದಿನಲ್ಲಿ, ಕ್ರೀಡಾ ಮತ್ತು ಸಾಂಸ್ಕೃತಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಆಸರಾ ಸ್ಕಾಲರ್ ಶಿಫ್ ಗರ್ಲ್ಸ್ ಅಲ್ಯೂಮಿನಿಯಂ ಟ್ರಸ್ಟ್ ಸಂಸ್ಥಾಪಕಿ ಆಶಾ ಅಗಾರ್ ವಾಲ್ ತಿಳಿಸಿದರು.

ಶುಚಿತ್ವ ಮತ್ತು ಜ್ಞಾನರ್ಜನೆಯನ್ನು ಎಂದಿಗೂ ಕೈ ಬಿಡಬೇಡಿ ಪ್ರತಿನಿತ್ಯ ಪುಸ್ತಕ ಓದುವುದನ್ನು ರೂಡಿಸಿಕೊಳ್ಳಿ ನಿಮ್ಮ ಭವಿಷ್ಯ ಉತ್ತಮವಾಗಿರುತ್ತೆ ಎಂದು ಸಲಹೆ ನೀಡಿದರು.

‘ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಏನು ಕಮ್ಮಿ ಆಗಬಾರದು ಎಂಬ ಉದ್ದೇಶದಿಂದ ಈ ಅಳಿಲ ಸೇವೆ ಮಾಡುತ್ತಿದ್ದೇವೆ. ಇದನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ವಿದ್ಯಾಭ್ಯಾಸವನ್ನು ಉತ್ತಮಪಡಿಸಿಕೊಳ್ಳಿ’ ಎಂದು ಟ್ರಸ್ಟ್ ವ್ಯವಸ್ಥಾಪಕಿ ರಚನಾ ಅಗಾರ್ ವಾಲ್ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮಲಿಂಗಪ್ಪ ಟಿ. ಬೇಗೂರು, ಪ್ರಾಧ್ಯಾಪಕರಾದ ಡಾ. ಕಾವಲಯ್ಯ, ಡಾ.ವಿಶ್ವೇಶ್ವರಯ್ಯ, ಡಾ. ರವಿಚಂದ್ರ, ಶರಣಭಸಪ್ಪ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಸುರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.