ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಬಿಜೆಪಿ ಕದ ತಟ್ಟುವ ಬಾಲಕೃಷ್ಣ

ಸೋದರನ ಹಗರಣ ಮುಚ್ಚಿ ಹಾಕಲು ಹುನ್ನಾರ: ಶಾಸಕ ಮಂಜುನಾಥ್‌ ಆರೋಪ
Last Updated 7 ಡಿಸೆಂಬರ್ 2020, 5:21 IST
ಅಕ್ಷರ ಗಾತ್ರ

ಮಾಗಡಿ: 'ಬಿಡಿಸಿಸಿ ಬ್ಯಾಂಕ್‌ ಹಗರಣದಲ್ಲಿ ಸಿಲುಕಿರುವ ಎಚ್.ಎನ್‌.ಅಶೋಕ್‌ ಅವರನ್ನು ರಕ್ಷಿಸಲು ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಬಾಲಕೃಷ್ಣ ಅವರು ರಾತ್ರಿ ವೇಳೆ ಬಿಜೆಪಿ ಸಚಿವರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ'ಎಂದು ಶಾಸಕ ಎ.ಮಂಜುನಾಥ ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ತಗ್ಗಿಕುಪ್ಪೆ ಜಿ.ಪಂ ವ್ಯಾಪ್ತಿಯ ಕಾರ್ಯಕರ್ತರ ಪೂರ್ವಭಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ’ನಾನು ಕ್ಷೇತ್ರದ ಅಭಿವೃದ್ದಿಗಾಗಿ ಆಡಳಿತ ಪಕ್ಷ ಬಿಜೆಪಿ ಸಚಿವರ ಮನೆಗೆ ಹೋಗುತ್ತೇನೆ. ಹಗಲಿನಲ್ಲಿ ಕಾಂಗ್ರೆಸ್, ರಾತ್ರಿ ಬಿಜೆಪಿ ಪಕ್ಷದತ್ತ ಹೋಗುವವರು ನನ್ನ ಬಗ್ಗೆ ಮಾತನಾಡುತ್ತಾರೆ. ಇದಕ್ಕೆಲ್ಲ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುವುದಾಗಿ‘ ಬಾಲಕೃಷ್ಣ ಅವರಿಗೆ ಟಾಂಗ್‌ ನೀಡಿದರು.

’ಎಚ್‌.ಸಿ ಬಾಲಕೃಷ್ಣ ಶಾಸಕರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ₹17ಕೋಟಿ ಅನುದಾನ ತಂದು ಕಾಮಗಾರಿ ಮಾಡಿಸದೆ ಕಳ್ಳಬಿಲ್ ಮಾಡಿಸಿದರು. ಈ ಪ್ರಕರಣದಲ್ಲಿ ಎಂಜಿನಯರ್‌ ಉದಯ್ ಜೈಲಿಗೆ ಹೋಗಿದ್ದಾರೆ‘ ಎಂದು ಹರಿಹಾಯ್ದುರು.

’ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ₹380 ಕೋಟಿ ಹಣ ತಂದಿದ್ದೇನೆ. ಹೇಮಾವತಿ ಕಾಮಗಾರಿಗೆ ₹175 ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಒಂದು ವರ್ಷದಲ್ಲಿ ತಾಲ್ಲೂಕಿಗೆ ಕೆರೆಗಳಿಗೆ ಹೇಮಾವತಿ ನೀರು ಹರಿಯಲಿದೆ’ ಎಂದರು.

ಎಚ್‌.ಸಿ.ಬಾಲಕೃಷ್ಣ ಅವರ ಚಿತಾವಣೆಯಿಂದ ಎಚ್‌.ಎಂ.ಕೃಷ್ಣಮೂರ್ತಿ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ದೂರಿದರು.

ಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಮುಖಂಡರಾದ ಹೇಳಿಗೆಹಳ್ಳಿ ತಮ್ಮಣ್ಣಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಎಪಿಎಂಸಿ ನಿರ್ದೇಶಕ ಮಂಜುನಾಥ್ , ಬ್ಯಾಲಕೆರೆ ಧವಳಗಿರಿ ಚಂದ್ರು, ತಗ್ಗಿಕುಪ್ಪೆ ರಾಮಣ್ಣ, ಹೊಸಹಳ್ಳಿ ರಂಗನಾಥ, ದಂಡಿಗೆಪುರ ಕುಮಾರ್, ಹಲಸಬಲೆ ಗಂಗರಾಜು, ಬಿ.ಆರ್‌.ಗುಡ್ಡೇಗೌಡ, ಕಲ್ಕರೆ ಶಿವಣ್ಣ, ರೂಪೇಶ್‌ ಕುಮಾರ್‌, ಸಿಡಗನಹಳ್ಳಿ ವೆಂಕಟೇಶ್‌, ಗೊಲ್ಲರ ಹಟ್ಟಿ ಕರಿಯಪ್ಪ, ಮಾರಪ್ಪ, ಗೆಜಗಾರುಗುಪ್ಪೆ ರಂಗಸ್ವಾಮಿ, ಗೊಲ್ಲರ ಹಟ್ಟಿ ಚಿಕ್ಕಣ್ಣ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT