ದೊಡ್ಡಬಳ್ಳಾಪುರ: ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಕಟ್ಟಡ ಹಳೇಯದಾಗಿದ್ದು, ₹14 ಕೋಟಿ ವೆಚ್ಚದಲ್ಲಿ ಕ್ಯಾಪಿಟಲ್ ಹೋಪ್ ಫೌಂಡೇಷನ್ ವತಿಯಿಂದ ಹೈಟೆಕ್ ಮಾದರಿಯಲ್ಲಿ 20 ವರ್ಷಗಳ ಮುನ್ನೋಟದೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ನಗರಸಭಾ ಆವರಣದಲ್ಲಿ ಶನಿವಾರ ನಡೆದ ಜನಸ್ಪಂಧನ ಸಭೆಯಲ್ಲಿ ಮಾತನಾಡಿ, ಈಗಿನ ಕಟ್ಟಡಕ್ಕೆ ನೂರು ವರ್ಷಗಳು ತುಂಬುತ್ತ ಬಂದಿದೆ. ಇದನ್ನು ದುರಸ್ಥಿ ಮಾಡುವುದು ಕಷ್ಟ. ಹಾಗಾಗಿಯೇ ಹೊಸ ಕಟ್ಟಡವನ್ನು ಕ್ಯಾಪಿಟಲ್ ಹೋಪ್ ಫೌಂಡೇಷನ್ ನಿರ್ಮಿಸಿಕೊಡಲು ಮುಂದೆ ಬಂದಿದೆ. ಹಾಗೆಯೇ ನಗರದ ಅರಳುಮಲ್ಲಿಗೆ ಬಾಗಿಲು ಪ್ರೌಢ ಶಾಲೆಯಲ್ಲಿ ನೂತನ ಪಿಯು ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದರು.

ನಗರದ ರಸ್ತೆ ವಿಸ್ತರಣೆಗೆ ಅಗತ್ಯ ಇರುವ ₹50 ಕೋಟಿಯನ್ನು ನಗರಸಭೆಗೆ ಸಾಲ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದಲ್ಲಿನ ಇಂದಿರಾ ಕ್ಯಾಂಟಿನ್ ನಲ್ಲಿನ ಆಹಾರದ ಗುಣಮಟ್ಟ ಸರಿ ಇಲ್ಲದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಗರದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರು ಮತ್ತಿತರೆ ಮೂಲಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶ, ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಸಾರ್ವಜನಿಕರ ಒಡಾಟಕ್ಕೆ ಅಡ್ಡಿಯಾಗುವಂತೆ ರಸ್ತೆಯ ಎರಡೂ ಬದಿಯಲ್ಲೂ ತರಕಾರಿ ಮತ್ತಿತರೆ ಅಂಗಡಿಗಳನ್ನು ಜೋಡಿಸುತ್ತಿರುವುದು, ಸೂಕ್ತ ಕಸ ನಿರ್ವಹಣೆ ಇಲ್ಲದೆ ಇರುವುದು, ಸೋಮೇಶ್ವರ ಕುಂಟೆ ಒತ್ತುವರಿ ತೆರವು, ನಗರಸಭೆಯಲ್ಲಿನ ಕಂದಾಯ ವಿಭಾಗದಲ್ಲಿ ಕಡತಗಳ ನಿರ್ವಹಣೆಯಲ್ಲಿನ ಲೋಪ, ಸರ್ಕಾರದ ಇತರೆ ಇಲಾಖೆಗಳಂತೆ ಇ-ಕಚೇರಿಯಲ್ಲಿ ಕಡತಗಳ ನಿರ್ವಹಣೆ, ವಾಣಿಜ್ಯ ಪರವಾನಿಗಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಸಭೆಯಲ್ಲಿ ಸಾರ್ವಜನಿಕರಾದ ಬಿ.ಎಸ್.ಚಂದ್ರಶೇಖರ್, ಚಿದಾನಂದ, ಜನಪರ ಮಂಜು, ಡಿ.ಶ್ರೀಕಾಂತ್, ಸುರೇಶ್ಬಾಬು ಅವರು ಶಾಸಕರ ಗಮನಕ್ಕೆ ತಂದರು.

ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ವಹಿಸಿದ್ದರು. ಉಪಾಧ್ಯಕ್ಷ ಎಂ.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ತಹಶೀಲ್ದಾರ್ ವಿದ್ಯಾವಿಭಾರಾಥೋಡ್, ಪೌರಾಯುಕ್ತ ಕಾರ್ತಿಕೇಶ್ವರ್ ಹಾಗೂ ಸದಸ್ಯರು ಇದ್ದರು.

ಮುಜುಗರಕ್ಕೆ ಒಳಗಾದ ಅಧಿಕಾರಿಗಳು

ರಸ್ತೆ ಬದಿಯಲ್ಲಿ ಕಸದ ರಾಶಿಗಳ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ಕುರಿತು ಸ್ಪಷ್ಟನೆ ಕೇಳಿದ ಶಾಸಕರಿಗೆ ಮಾಹಿತಿ ನೀಡಿದ ನಗರಸಭೆ ಅಧಿಕಾರಿಗಳು ನಗರದಲ್ಲಿ ಇರುವ ಮನೆಗಳ ಅಂಕಿ ಅಂಶ ನೀಡುವಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಹಿತಿ ನೀಡಿ ಸಾರ್ವಜನಿಕರ ಸಮ್ಮುಖದಲ್ಲಿ ಮುಜುಗರಕ್ಕೆ ಒಳಗಾದರು. ಅಧಿಕಾರಿಗಳ ಮಾಹಿತಿಯಿಂದ ಸಿಟ್ಟೆಗೆದ್ದ ಶಾಸಕ ಧೀರಜ್ ಮುನಿರಾಜು ನಗರದಲ್ಲಿ ಎಷ್ಟು ಮನೆಗಳು ಇವೆ ಎನ್ನುವ ಅಂಕ ಅಂಶಗಳೇ ಇಲ್ಲದೆ ಕಸ ಸಂಗ್ರಹಣೆ ಕಂದಾಯ ವಸೂಲಾತಿ ಯಾವ ರೀತಿ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ನಗರದ ರಸ್ತೆ ಬದಿಗಳಲ್ಲಿ ಕಸ ಸುರಿಯುವುದನ್ನು ತಡೆಯಲು ಬಿಬಿಎಂಪಿ ಮಾದರಿಯಲ್ಲಿ ಮಾರ್ಷಲ್ಗಳನ್ನು ನೇಮಕ ಮಾಡಿಕೊಳ್ಳುವ ಕಡೆಗೆ ಪರಿಶೀಲನೆ ನಡೆಸಬೇಕು. ನಗರಸಭೆಯಲ್ಲಿ ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಮೂಲಕ ನಗರದ ಸ್ವಚ್ಛತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳ ಕಡೆಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.