ಗುರುವಾರ , ಆಗಸ್ಟ್ 22, 2019
23 °C

ಹೊಸಕೋಟೆ: ರಥ ಸಮರ್ಪಣೆ

Published:
Updated:
Prajavani

ಹೊಸಕೋಟೆ: ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.

ದೇವಾಲಯಕ್ಕೆ ಸುಮಾರು ₹ 3 ಲಕ್ಷ ಮೌಲ್ಯದ ರಥವನ್ನು ಅರ್ಪಿಸಲಾಯಿತು. ವಿವಿಧ ಭಕ್ತರಿಂದ ಸಂಗ್ರಹಿಸಿದ ಹಣದಲ್ಲಿ ಈ ಕಾರ್ಯ ನೆರವೇರಿದೆ. ಈ ನಿಮಿತ್ತ ದೇವಾಲಯದಲ್ಲಿ ವಾಸ್ತು ಹೋಮ ಹಾಗೂ ಇತರೆ ಹೋಮಗಳನ್ನು ನಡೆಸಲಾಯಿತು.

ಮುಖಂಡ ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.

Post Comments (+)