ತೇಪೆ ಕೂಡ ಹಾಕಿಲ್ಲ ಸಂತೆಗೇಟ್ ಬಳಿಯ ವೃತ್ತದ ಬಳಿ ಎರಡು ರಾಷ್ಟೀಯ ಹೆದ್ದಾರಿ ಸಂಧಿಸುವ ಕಾರಣ ಇದನ್ನು ಯಾರು ದುರಸ್ತಿ ಮಾಡಬೇಕು ಎಂಬುದು ತಾಲ್ಲೂಕು ಆಡಳಿತ ವರ್ಗಕ್ಕೆ ಆಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾಗಲಿ ಇಲ್ಲ. ಹಾಗಾಗಿಯೇ ವರ್ಷಗಳಿಂದ ಇಲ್ಲಿ ಕನಿಷ್ಠ ತೇಪೆ ಹಚ್ಚುವ ಕೆಲಸವು ಆಗುತ್ತಿಲ್ಲ
ವರದಾಪುರ ನಾಗರಾಜ್, ಹೊಸಕೋಟೆ
ಸಂತೆಗೇಟ್ ಬಳಿಯ ಗುಂಡಿಮಯ ರಸ್ತೆಯಲ್ಲಿ ಬೃಹತ್ ವಾಹನಗಳು ಸಂಚರಿಸುತ್ತದೆ. ಬೈಕ್ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಮನೆ ತಲುಪುವುದು ಗ್ಯಾರೆಂಟಿ ಇರುವುದಿಲ್ಲ. ಇದು ಸರ್ಕಾರಗಳು ನಮಗೆ ನೀಡುತ್ತಿರುವ ಹೊಸ ಗ್ಯಾರಂಟಿ