ಹೊಸಕೋಟೆ: ರಾಜ್ಯ ರಾಜಧಾನಿ ಸಮೀಪ ಇರುವ ಹೊಸಕೋಟೆ ನಗರದ ಸಮಸ್ಯೆಗಳು ತೀರಾ ಹಳೆಯದಾಗಿವೆ. ಹಲವು ವರ್ಷದಿಂದ ಸಮರ್ಪಕ ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕಿಂಗ್ ಇಲ್ಲದೆ ಜನ ಹೈರಾಣಾಗಿದ್ದಾರೆ. ಕಸ ವಿಲೇವಾರಿಯೂ ವ್ಯವಸ್ಥಿತವಾಗಿಲ್ಲದೆ ನಗರದ ಹಲವೆಡೆ ಗಲೀಜು ಆವರಿಸಿದೆ.

ರಾಷ್ಟ್ರೀಯ ಹೆದ್ದಾರಿ–75 ಹಾಗೂ 648 ನಗರದ ಮಧ್ಯ ಮತ್ತು ಹೊರ ವಲಯದಲ್ಲಿ ಹಾದು ಹೋಗುತ್ತದೆ. ಆದರೆ ಇದರ ಸುತ್ತಮುತ್ತ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಗರಸಭೆ ಎನಿಸಿಕೊಳ್ಳಲು ಬೇಕಾದ ಕನಿಷ್ಠ ಮೂಲ ಸೌಕರ್ಯಗಳು ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಪಟ್ಟಣದಲ್ಲಿನ ಯಾವ ರಸ್ತೆಗೂ ಸರಿಯಾದ ಫುಟ್ಪಾತ್, ಸರಾಗವಾಗಿ ಮಳೆ ನೀರು ಹರಿದು ಹೋಗಲು ಸುಸಜ್ಜಿತ ಎರಡೂ ಬದಿಯಲ್ಲಿ ಒಳ ಚರಂಡಿ ಇಲ್ಲ. ಕೆಲವು ವಾರ್ಡ್ ಹೊರತುಪಡಿಸಿ ಉಳಿದ ಯಾವ ವಾರ್ಡ್ಗಳಿಗೂ ಸಮರ್ಪಕ ರಸ್ತೆ ಕಾಣ ಸಿಗದು. ಇನ್ನೂ ಉದ್ಯಾನದ ಮಾತು ದೂರದ ಸಂಗತಿ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಹೊಸಕೋಟೆ ಅಭಿವೃದ್ದಿ ಆಗುತ್ತಿದೆ ಎಂದು ಪ್ರತಿ ಬಾರಿ ಗೆಲ್ಲುವ ಜನಪ್ರತಿನಿಧಿಗಳು ಹೇಳುತ್ತಾಲೇ ಬರುತ್ತಿದ್ದಾರೆ. ಆದರೆ ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ಆಡಳಿತ ಸಂಸ್ಥೆಗಳ ಜಾಣ ಕುರುಡು: ನಗರದಲ್ಲಿ ಇವೆಷ್ಟಲ್ಲೆ ಸಮಸ್ಯೆಗಳಿದ್ದರೂ ನಗರಸಭೆ, ಆಯಾಯ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಪಾದಚಾರಿ ಮಾರ್ಗ ಇಲ್ಲ

ಬೆಂಗಳೂರಿನ ಹೊರವಲಯಕ್ಕೆ ಹೊಸಕೋಟೆ ನಗರ ಹೊಂದಿಕೊಂಡಿರುವ ಕಾರಣ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಆದರೆ ಪಾದಚಾರಿಗಳು ಓಡಾಡಲು ಪಾದಚಾರಿ ಮಾರ್ಗ ಇಲ್ಲ. ಹಿರಿಯ ನಾಗರಿಕರು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವವರಿಗೆ ಫುಟ್ಪಾತ್ ಇಲ್ಲ. ಹೀಗಾಗಿ ರಸ್ತೆ ಬದಿಯೇ ನಡೆದುಕೊಂಡು ಹೋಗಬೇಕು. ರಸ್ತೆಯಲ್ಲಿ ಹೋಗುವ ಭಾರಿ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ಸಾಗಬೇಕು.

ಪಾರ್ಕಿಂಗ್ ಎಲ್ಲಿ?

ಪ್ರತಿನಿತ್ಯ ಹಳ್ಳಿಗಳಿಂದ ರೈತರು, ವ್ಯಾಪಾರಿಗಳು, ನೌಕರರು ಹಾಗೂ ದಿನನಿತ್ಯ ಕಂಪನಿಗಳಿಗೆ ಕೆಲಸಕ್ಕೆ ಹೋಗುವವರು ನಗರಕ್ಕೆ ಬರುತ್ತಾರೆ. ಆದರೆ ವಾಹನಗಳ ನಿಲುಗಡೆ ನಿರ್ದಿಷ್ಟ ಜಾಗ ಇಲ್ಲ. ಹೀಗಾಗಿ ವಾಹನ ಸವಾರರು ಎಲ್ಲಂದರಲ್ಲಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ. ಹೆಚ್ಚಾಗಿ ರಸ್ತೆ ಬದಿಯೇ ವಾಹನ ನಿಲುಗಡೆ ಮಾಡುವುದರಿಂದ ಪ್ರಮುಖ ರಸ್ತೆಗಳಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗಿರುತ್ತದೆ. ಅದು ಬೆಳಗ್ಗೆ ಸಮಯವೇ ದಟ್ಟಣೆ ಉಂಟಾಗುವುದರಿಂದ ಶಾಲೆ–ಕಾಲೇಜಿಗೆ ವಿದ್ಯಾರ್ಥಿಗಳು ಮತ್ತು ನೌಕರರು ಸರಿಯಾದ ಸಮಯಕ್ಕೆ ಕೆಲಸ ಹಾಜರಾಗಲು ಆಗುತ್ತಿಲ್ಲ.

ಸ್ಕೈವಾಕ್: ಅಶಕ್ತರು ಹೇಗೆ ಓಡಾಡಬೇಕು

ಹೊಸಕೋಟೆ ಪಟ್ಟಣದ ಮಧ್ಯೆ ಹಾದುಹೋಗಿರುವ ಹೆದ್ದಾರಿ ದಾಟಲು ಅನುಕೂಲವಾಗಲೆಂದು ಹೆಸರಿಗೆ ಮಾತ್ರ ಸ್ಕೈ ವಾಕ್ ನಿರ್ಮಾಣ ಮಾಡಿದಂತೆ ಕಾಣುತ್ತದೆ. ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು, ಅಂಗವಿಕಲರಿಗೆ ಸ್ಕೈ ವಾಕ್ ಮೇಲೆ ಹೋಗಲು ಲಿಫ್ಟ್ ವ್ಯವಸ್ಥೆ ಇಲ್ಲ. ಅಶಕ್ತರು ಹೇಗೆ ಓಡಾಡಬೇಕೆಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯ ನಿವಾಸಿಗಳು.

ಮಳೆ ಬಂದರೆ ಸ್ಕೈ ವಾಕ್ ಮೆಟ್ಟಿಲುಗಳಲ್ಲಿ ಕೆಸರು ರಾಡಿ ತುಂಬಿಕೊಳ್ಳುತ್ತದೆ. ಕೋಲಾರ ಕಡೆ ಹೋಗುವ ದಿಕ್ಕಿನಲ್ಲಿರುವ ಸ್ಕೈ ವಾಕ್ ಬಳಿ ಬಸ್ ಶೆಲ್ಟರ್ ನಿರ್ಮಿಸಿದ್ದು, ಅಲ್ಲಿ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಇದು ಅಧಿಕಾರಿಗಳ ಕೆಲಸಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ ನಾಗರಿಕರು.

ಎಲ್ಲಂದರಲ್ಲಿ ಕಸ, ಚರಂಡಿ ದುರ್ನಾತ

ಹೊಸಕೋಟೆ ನಗರದಲ್ಲಿ 82,000 ಕ್ಕೂ ಹೆಚ್ಚು ಜನಸಂಖ್ಯೆ ಇದೆ. ವಿಸ್ತೀರ್ಣವು ಸುಮಾರು 13 ಕಿ. ಮೀ. ಗೂ ಮೀರಿ ಬೆಳೆಯುತ್ತಿದೆ. ಹೆಸರಿಗೆ ಮಾತ್ರ 31 ವಾರ್ಡ್ ಹೊಂದಿದೆ. ಆದರೆ ಯಾವ ವಾರ್ಡ್ಗೆ ಹೋದರೂ ಕಸದ ರಾಶಿ ಕಾಣುತ್ತದೆ. ಚರಂಡಿಗಳ ನೀರು ನಿಂತು ಗಬ್ಬುನಾರುತ್ತಿದೆ.

ರಸ್ತೆ ಬದಿಯಲ್ಲೇ ಜನ ಕಸ ಸುರಿಯುತ್ತಿದ್ದು, ಈ ಕಸ ಸರಿಯಾದ ಸಮಯಕ್ಕೆ ವಿಲೇವಾರಿಯಾಗದೆ ದುರ್ನಾತ ಬೀರುತ್ತಿದೆ. ಇದರ ಜೊತೆ ಚರಂಡಿ ದುರ್ವಾಸನೆ ಸೇರಿಕೊಂಡು ಜನರಲ್ಲಿ ಸಾಂಕ್ರಾಮಿಕ ಕಾಯಿಲೆ ಭೀತಿ ಹುಟ್ಟಿಸಿವೆ.

ನಗರ ಬೆಳೆವಣಿಗೆ ತಕ್ಕಂತೆ ಯೋಜನೆ ರೂಪಿಸಿ

ಹೊಸಕೋಟೆ ನಗರದ ಜನಸಂಖ್ಯೆ ಬೆಳೆದಂತೆ ನಗರದ ವಿಸ್ತೀರ್ಣವು ವಿಸ್ತರಣಯಾಗುತ್ತಿದೆ. ಹೀಗಾಗಿ ನಗರಸಭೆ ಹಾಗೂ ತಾಲ್ಲೂಕು ಆಡಳಿತ ಬೆಳವಣಿಗೆ ತಕ್ಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕೆಂದು ಸ್ಥಳೀಯ ನಿವಾಸಿಗಳ ಆಗ್ರಹ.

ಹೊಸಕೋಟೆ ತಾಲ್ಲೂಕಿನ ಅಭಿವೃದ್ದಿಗೆ ಅಡಳಿತವರ್ಗ ಮತ್ತು ಜನರಿನಂದ ಆಯ್ಕೆಗೊಂಡ ಜನಪ್ರತಿನಿದಿಗಳು ಯೋಚಿಸಬೇಕೆಂಬುದು ಜನರ ಅಭಿಲಾಷೆಯಾಗಿದೆ.

ಹೊಸಕೋಟೆ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಮತ್ತು ಹೊರವರ್ತುಲ ರಸ್ತೆ ಕಾಮಗಾರಿಗಳು ನಡೆದರೆ ಮಾತ್ರ ಪಟ್ಟಣದಲ್ಲಿ ದಟ್ಟಣೆ ಕಡಿಮೆಯಾಗಿ ಅಭಿವೃದ್ದಿ ಕೆಲಸ ಮಾಡಲು ಅವಕಾಶ ಸಿಗುತ್ತದೆ.

-ಎಚ್.ಕೆ. ಮಂಜುನಾಥ್ ಸ್ಥಳೀಯ ನಿವಾಸಿ

ಸ್ಥಳೀಯ ರಾಜಕೀಯ ನಾಯಕರ ಇಚ್ಛಾಶಕ್ತಿ ಮತ್ತು ಆಡಳಿತದ ದೂರದೃಸ್ಟಿತ್ವ ಇಲ್ಲದ ಆಡಳಿತ ವೈಖರಿಯಿಂದ ನಗರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ

-ಚೆನ್ನಕೃಷ್ಣಪ್ಪ ಉಪನ್ಯಾಸಕ

ನಗರಸಭೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇದೆ. ಹೀಗಾಗಿಯೇ ನಗರಸಭೆ ರೂಪುಗೊಂಡ ಹಲವು ವರ್ಷ ಕಳೆದರೂ ನಿರೀಕ್ಷಿತಾ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ.

-ಕೆ. ವಿ.ಸುರೇಶ್ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.