ಮಂಗಳವಾರ, ಜನವರಿ 21, 2020
28 °C

ಅನುದಾನ ಸದ್ಬಳಕೆಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಸರ್ಕಾರದಲ್ಲಿ ಮೀಸಲು ಇಟ್ಟಿರುವ ಪರಿಶಿಷ್ಟರ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಫಲಾನುಭವಿಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಒತ್ತಾಯಿಸಿದರು.

ಇಲ್ಲಿನ ಶಾಸಕರ ಕಚೇರಿಯಲ್ಲಿ ದೇವನಹಳ್ಳಿ ನಗರದ 22ನೇ ವಾರ್ಡಿನ ನಿವಾಸಿಗಳಾದ ನರಸಪ್ಪ ಮತ್ತು ರವಿಕುಮಾರ್‌ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿವತಿಯಿಂದ ವಿವಿಧ ಚಿಕಿತ್ಸೆಗೆ ಚೆಕ್ ವಿತರಿಸಿ ಮಾತನಾಡಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸರ್ಕಾರದಲ್ಲಿ ಪರಿಶಿಷ್ಟರ ಕಲ್ಯಾಣ ಅಭಿವೃದ್ಧಿಗಾಗಿ 36 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಮೀಸಲಿಡಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿರುವವರು ಸಂಖ್ಯೆ 956 ಇದೆ. ನಾಲ್ಕು ಅಭಿವೃದ್ಧಿ ನಿಗಮಗಳಲ್ಲಿ ಆಯ್ಕೆಯಾಗಿರುವುದು ಕೇವಲ 56 ಅರ್ಹರು ಎಂದರೆ ಸರ್ಕಾರ ಅಭಿವೃದ್ಧಿ ನಿಗಮ ಮಾಡಿರುವ ಉದ್ದೇಶವಾದರೂ ಏನು ಎಂಬುದು ಪ್ರಶ್ನಾರ್ಹ’ ಎಂದು ದೂರಿದರು.

‘ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರಕ್ಕೂ ಹೆಚ್ಚು ಪರಿಶಿಷ್ಠ ಜಾತಿ ಸಮುದಾಯವಿದೆ, ಅದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ 12 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಆರ್ಜಿ ಸಲ್ಲಿಸಿದವರ ಸಂಖ್ಯೆ 81, ಉಧ್ಯಮ ಶೀಲತಾ ಯೋಜನೆಯಡಿ ಆರ್ಜಿ ಸಲ್ಲಿಸಿದವರ ಸಂಖ್ಯೆ 445 ಆಯ್ಕೆ ಮಾತ್ರ6, ತಾಂಡಾ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 27 ಆರ್ಜಿ ಸಲ್ಲಿಸಿದ್ದರು ಒಬ್ಬರನ್ನು ಮಾತ್ರ ಆಯ್ಕೆ ಎಂದರೆ ಸರ್ಕಾರ ಯಾವ ನಿಟ್ಟಿನಲ್ಲಿ ನಿಗಮ ಮಂಡಳಿಗಳಿಗೆ ಫಲಾನುಭವಿಗಳ ಆಯ್ಕೆಗೆ ನಿಯಮ ಅನುಸರಿಸಲಾಗಿದೆ ಎಂಬುದೇ ಆರ್ಥವಾಗುತ್ತಿಲ್ಲ.

ಅನುದಾನಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿ ಒಂದೊಂದು ಯೋಜನೆಗೆ ಇಂತಿಷ್ಟು ಫಲಾನುಭವಿಗಳ ಆಯ್ಕೆ ಮಾಡುವಂತೆ ಸೂಚನೆ ನೀಡಬೇಕು ಮತ್ತು ಕಾಲ ಮಿತಿಯನ್ನು ನಿಗದಿಪಡಿಸಬೇಕು. ಪರಿಶಿಷ್ಟ ಕಾಲೊನಿಗಳ ಮೂಲ ಸೌಲಭ್ಯ ಅಭಿವೃದ್ಧಿ ಅನುದಾನದ ಕತೆಯು ಇದೇ ಆಗಿದೆ ಎಂದು ದೂರಿದರು. ಸರ್ಕಾರ ಪರಿಶಿಷ್ಠರ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಪರಿಶಿಷ್ಠರಿಗೆ ಮೀಸಲಾದ ಅನುದಾನ ಇತರೆ ಇಲಾಖೆಗೆ ವರ್ಗಾಹಿಸುವ ಹುನ್ನಾರ ನಡೆಸುತ್ತಿದೆ, ಯಾವುದೇ ಕಾರಣಕ್ಕೂ ್ಕೂ ಅನುದಾನ ಬೇರೆಡೆ ವರ್ಗಾಹಿಸಬಾರದು ಎಂದು ಆಗ್ರಹಿಸಿದರು. ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ನಗರ ಘಟಕ ಆಧ್ಯಕ್ಷ ಮುನಿನಂಜಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು