ಶನಿವಾರ, ಫೆಬ್ರವರಿ 29, 2020
19 °C

ಜಾತ್ರಾ ಮಹೋತ್ಸವದಲ್ಲಿ ದೇವರ ಅಲಂಕಾರ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಇಲ್ಲಿನ ಸರೋವರ ಬೀದಿಯಲ್ಲಿ ಮಾರುತಿ ಯುವಕರ ಬಳಗದ ವತಿಯಿಂದ ನಡೆದ 9ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ವಿವಿಧ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಇತಿಹಾಸ ಪ್ರಸಿದ್ಧ ಬೆಂಗಳುರು ನಗರ ದೇವತೆ ಅಣ್ಣಮ್ಮ ದೇವಿ, ದೇವನಹಳ್ಳಿ ನಗರದ ದೇವತೆಗಳಾದ ಚೌಡೇಶ್ವರಿ, ಕೋಟೆ ಮಾರಮ್ಮ, ದೊಡ್ಡಮ್ಮ ,ಪೂಜಮ್ಮ ,ಮುನೇಶ್ವರ ಸ್ವಾಮಿ, ತರಗು ಆಂಜನೇಯ ಸ್ವಾಮಿ, ಸರೋವರ ಬೀದಿ ಆಂಜನೇಯ ಸ್ವಾಮಿ,ಚಿಕ್ಕಕೆರೆ ಆಂಜನೇಯ ಸ್ವಾಮಿ ಮತ್ತು ರಾಜರಾಜೇಶ್ವರಿ ದೇವಿಗೆ ದೀಪಾರತಿಗಳು ನಡೆದವು.

ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 150 ಮೀಟರ್ ಉದ್ದ ರಸ್ತೆಯಲ್ಲಿ 46 ಮಹಿಳೆಯರು ರಂಗೋಲಿ ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ಶುಕ್ರವಾರ ಸಂಜೆ 6 ಕ್ಕೆ ಶ್ರೀ ಶಾರದಾಂಬ ಕಲಾ ವೃಂದದ ಸಿ.ತ್ಯಾಗರಾಜ್ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಭಕ್ತರು ದೇವತೆಗಳ ದರ್ಶನ ಪಡೆದು ತೀರ್ಥ ಪ್ರಸಾದ ಸ್ವಿಕರಿಸಿದರು. ಶನಿವಾರ ದೇವತೆಗಳ ಮೂಲ ಸ್ಥಳಕ್ಕೆ ಬೀಳ್ಕೊಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು