ದೊಡ್ಡಬಳ್ಳಾಪುರ: ನಗರದ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಲ್ಲಿ ಕರವೇ ಪ್ರವಿಟ್ ಶೆಟ್ಟಿ ಬಣದ ಕಾರ್ಯಕರ್ತರು ಬುಧವಾರ ‘ಆಪರೇಷನ್ ಸಿಂಧೂರ’ ಅಂಗವಾಗಿ ಭಾರತೀಯ ಸೇನೆಯ ಸಾಧನೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಭಾರತೀಯರನ್ನು ಕೆಣಕಿದರೆ ಕೈಕಟ್ಟಿ ಕೂರುವುದಿಲ್ಲ. ಸೂಕ್ತ ಪ್ರತ್ಯುತ್ತರ ನೀಡುವ ಸ್ಪಷ್ಟ ಸಂದೇಶವನ್ನು ಭಾರತೀಯ ಸೇನೆ ನೀಡಿವೆ. ಭಾರತದ ಸಹನೆ ಕಳೆದುಕೊಂಡರೆ ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಬುಧವಾರ ರಾತ್ರಿ ನಡೆದ ಪ್ರತಿಕಾರದ ದಾಳಿ ಸಾಕ್ಷಿಯಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ತಿಳಿಸಿದರು.

ಪಹಲ್ಗಾಮ್ ದಾಳಿಗೆಯಲ್ಲಿ ಮಡಿದ ಅಮಾಯಕರ ಸಾವಿಗೆ ಆಪರೇಷನ್ ಸಿಂಧೂರ್ ನೆಮ್ಮದಿ ತಂದಿದೆ. ಇದಕ್ಕೆ ನಮ್ಮ ದೇಶದ ವೀರ ಯೋಧರ ಪರಿಶ್ರಮವನ್ನು ಎಲ್ಲಾ ಭಾರತೀಯರು ಗೌರವಿಸಬೇಕಿದೆ. ನಮ್ಮ ಹೆಣ್ಣು ಮಕ್ಕಳ ಅಣೆಯಲ್ಲಿನ ಸಿಂಧೂರವನ್ನು ಅಳಸಿದ ಪಾಕಿಸ್ತಾನದ ಉಗ್ರರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.