ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru | ಪ್ರಯಾಣಿಕನ ಪ್ಯಾಂಟ್‌ನಲ್ಲಿ ₹22.58 ಲಕ್ಷ ಮೌಲ್ಯದ ಚಿನ್ನದ ಪುಡಿ

Published 25 ಫೆಬ್ರುವರಿ 2024, 4:07 IST
Last Updated 25 ಫೆಬ್ರುವರಿ 2024, 4:07 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಾರ್ಜಾದಿಂದ ಬಂದ ಪ್ರಯಾಣಿಕ ಪ್ಯಾಂಟ್‌ನಲ್ಲಿ ಪುಡಿ ರೂಪದ ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ಬೆಂಗಳೂರು ಏರ್‌ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. 

ಬಂಧಿತ ಪ್ರಯಾಣಿಕನಿಂದ ಒಟ್ಟು 367.7 ಗ್ರಾಂ ಚಿನ್ನದ ಪುಡಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅದರ ಅಂದಾಜು ಮೌಲ್ಯ ₹22.58 ಲಕ್ಷ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಯಾಣಿಕ ತನ್ನ ಪ್ಯಾಂಟ್‌ನಲ್ಲಿ ಪದರ ಮಾಡಿಕೊಂಡು ಅದರೊಳಗೆ ಚಿನ್ನದ ಪುಡಿ ತುಂಬಿಸಿಕೊಂಡಿದ್ದ. ಪ್ರಯಾಣಿಕ ತೊಟ್ಟಿದ್ದ ಕಪ್ಪುಬಣ್ಣದ ಜೀನ್ಸ್ ಪ್ಯಾಂಟ್‌ ಚಿನ್ನ ಕಳ್ಳಸಾಗಣೆ ಮಾಡಲೆಂದೇ ವಿಶೇಷವಾಗಿ ತಯಾರು ಮಾಡಿದ್ದ ಎನ್ನಲಾಗಿದೆ. ಈ ರೀತಿಯ ಪ್ಯಾಂಟ್‌ ಧರಿಸಿ ಬರುವ ಪ್ರಯಾಣಿಕರ ಮೇಲೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT