ಮಂಗಳವಾರ, ಜುಲೈ 27, 2021
24 °C

ಚಿತ್ರಮಂದಿರದ ನೌಕರರಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ನಾಲ್ಕು ಚಿತ್ರಮಂದಿಗಳ ನೌಕರರಿಗೆ ಭೈರವಿ ಅಭಿಮಾನಿಗಳ ಬಳಗ ಮತ್ತು ‘ಚಂದಮಾಮ ಚಕ್ಕುಲಿಮಾಮ’ ಚಿತ್ರ ತಂಡ ಸೌಂದರ್ಯ ಮಹಲ್ ಚಿತ್ರ ಮಂದಿರದ ಸಮೀಪ ದಿನಸಿ ಕಿಟ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ‘ಚಂದಮಾಮ ಚಕ್ಕುಲಿಮಾಮ’ ಚಿತ್ರದ ನಿರ್ಮಾಪಕರಾದ ಸಿ.ಲಕ್ಷ್ಮೀಪತಿ, ಹುಲುಕುಂಟೆ ಮಹೇಶ್ ಮಾತನಾಡಿ, ‘ಮೂರು ತಿಂಗಳಿಂದ ಚಿತ್ರಮಂದಿರಗಳು ಮುಚ್ಚಿದ್ದು, ಚಿತ್ರಮಂದಿರದ ನೌಕರರು ತೀವ್ರ ಸಿಲುಕಿದ್ದಾರೆ. ಆದರೂ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಸಂಘ ಸಂಸ್ಥೆಗಳಿಂದ ಸಹಾಯ ಹಸ್ತು ಸಿಕ್ಕುತ್ತಿದೆ. ಆದರೆ ಯಾವುದೇ ಸಂಘ ಸಂಸ್ಥೆಗಳು ಅಥವಾ ಸರ್ಕಾರ ಚಿತ್ರಮಂದಿರದ ನೌಕಕರನ್ನು ಕಡೆಗಣಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಚಿತ್ರತಂಡ ಮತ್ತು ಭೈರವಿ ಅಭಿಮಾನಿಗಳ ಬಳಗ ಚಿತ್ರಮಂದಿರದ ನೌಕರರ ಸಂಕಷ್ಟಕ್ಕೆ ನೆರವಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಎರಡು ತಾಲ್ಲೂಕು, ರಾಮನಗರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹಲವು ಚಿತ್ರಮಂದಿರಗಳು ಸೇರಿದಂತೆ ಸುಮಾರು 20 ಚಿತ್ರ ಮಂದಿರಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಮಂಡ್ಯ,ಮೈಸೂರು,ತುಮಕೂರು ಜಿಲ್ಲೆಗಳ ಚಿತ್ರಮಂದಿರಗಳ ನೌಕರರಿಗೆ ದಿನಸಿ ಕಿಟ್ ನೀಡಲು ಸಿದ್ದತೆ ನಡೆಸಿದ್ದೇವೆ. ಈ ಮೂಲಕ ಇತರೆ ಸಂಘ ಸಂಸ್ಥೆ ಅವರಿಗೆ ಸಹಾಯ ಹಸ್ತ ನೀಡಿದರೆ. ನಮ್ಮ ಸೇವೆ ಸಾರ್ಥಕ ಎನಿಸುತ್ತದೆ’ ಎಂದರು.

‘ಚಂದಮಾಮ ಚಕ್ಕುಲಿಮಾಮ’ ಚಿತ್ರ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಾಲ ನಟಿ ಭೈರವಿ ಮಾತನಾಡಿ, ಈಗಾಗಲೇ 12 ಸಿನಿಮಾಗಳಲ್ಲಿ ನಟಿಸಿದ್ದು ಇದರ ಗಳಿಕೆಯ ಹಣವನ್ನು ನಮ್ಮ ತಂದೆ ಮಾರ್ಗದರ್ಶನದಲ್ಲಿ ಸಂಕಷ್ಟದಲ್ಲಿರುವ ಚಿತ್ರಮಂದಿರದ ನೌಕರರಿಗೆ ದಿನಸಿ ಕಿಟ್ ನೀಡುವ ಮೂಲಕ ಅವರ ಸಂಕಷ್ಠಕ್ಕೆ ನೆರವಾಗುತ್ತಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಕರವೇ(ಪ್ರವೀಣ್‍ಶೆಟ್ಟಿ ಕುಮಾರ್ ಬಣ) ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ಜನಪದ ಗಾಯಕ ಕುಣಿಗಲ್ ರಾಮಚಂದ್ರ, ಚಿತ್ರಮಂದಿರದ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.