ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಪರಂಪರೆಯಲ್ಲಿ ಕೃಷ್ಣ ಸರ್ವ ಶ್ರೇಷ್ಠ: ಅನಂತಕುಮಾರಿ

ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ಅಭಿಮತ
Last Updated 2 ಸೆಪ್ಟೆಂಬರ್ 2018, 14:08 IST
ಅಕ್ಷರ ಗಾತ್ರ

ದೇವನಹಳ್ಳಿ: ಸನಾತನ ಹಿಂದೂಧಾರ್ಮಿಕ ಪರಂಪರೆಯಲ್ಲಿ ಶ್ರೀ ಕೃಷ್ಣನಿಗೆ ಸರ್ವ ಶ್ರೇಷ್ಠ ಸ್ಥಾನ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಧಾರ್ಮಿಕ ಪರಂಪರೆಯಲ್ಲಿರುವ ಪ್ರತಿಯೊಂದು ಸಮುದಾಯ ಕೃಷ್ಣ ಎಂದರೆ ಇಷ್ಟಪಡುತ್ತಾರೆ. ಕೃಷ್ಣನ ವೇಷಧಾರಿಗಳನ್ನು ನೋಡಿದಾಗ ಕೃಷ್ಣನ ಬಾಲ ಲೀಲೆಗಳ ನೆನಪು ಮರುಕಳಿಸುತ್ತವೆ. ಕೃಷ್ಣನ ರೂಪ, ವ್ಯಕ್ತಿತ್ವವೇ ಆಕರ್ಷಣೀಯ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷ್ಮಣ್‌ಗೌಡ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗ ರಾಜ್ಯ ಘಟಕ ಉಪಾಧ್ಯಕ್ಷ ಸಿ. ಜಗನ್ನಾಥ್‌ ಮಾತನಾಡಿ, ಯದುನಂದನ, ಯಾದವ ಕುಲ ತಿಲಕ ಎಂದು ಕರೆಯಲ್ಪಡುವ ಕೃಷ್ಣನ ಜನ್ಮಾಷ್ಟಮಿ ಬರಿ ಗೊಲ್ಲ ಸಮುದಾಯಕ್ಕೆ ಸೀಮಿತವಾಗಿಲ್ಲ. ಸರ್ವರೂ ಶ್ರದ್ಧೆಯಿಂದ ಪೂಜಿಸುತ್ತಾರೆ ಎಂದರು.

ಪುರಸಭೆ ಅಧ್ಯಕ್ಷ ಎಂ. ಮೂರ್ತಿ ಮಾತನಾಡಿ, ಕೃಷ್ಣ ದುಷ್ಟರನ್ನು ಸಂಹರಿಸಿ ಜಗತ್ತಿಗೆ ಶಾಂತಿ ನೀಡಲು ಅವತರಿಸಿದ ಮಹಾ ಪುಣ್ಯ ಪುರುಷ ಎಂದು ನಾವು ನಂಬಿದ್ದೇವೆ. ವಿರೋಧಿಗಳನ್ನು ಹೇಗೆ ಹೆಣೆಯುವುದು. ಗೆಳೆತನವನ್ನು ವಿಶ್ವಾಸದಿಂದ ಬೆಳೆಸುವುದು, ಹಿರಿಯರಿಗೆ ಹೇಗೆ ಗೌರವ ನೀಡುವುದು ಎಂಬುದನ್ನು ರಾಮಾಯಣ ಮತ್ತು ಮಹಾಭಾರದ ಮಹಾ ಗ್ರಂಥಗಳಿಂದ ತಿಳಿದುಕೊಳ್ಳಬಹುದು ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಕೃಷ್ಣನನ್ನು ಅವತಾರ ಪುರುಷ, ಸರ್ವಾಂತರ್ಯಾಮಿ ಎಂದು ಕರೆಯುತ್ತೇವೆ. ಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ಒಂದೊಂದು ಶ್ಲೋಕವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಮುಲ್‌ ಉಪಾಧ್ಯಕ್ಷ ಬಿ.ಶ್ರೀನಿವಾಸ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ಪುರಸಭೆ ಉಪಾಧ್ಯಕ್ಷೆ ಆಶಾರಾಣಿ, ಪುರಸಭೆ ಸದಸ್ಯರಾದ ಜಿ.ಎ. ರವೀಂದ್ರ, ಗಾಯಿತ್ರಿ, ಶಶಿಕುಮಾರ್‌, ಸಾಮಾಜಿಕ ಭಾವಮಿಲನ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷ ಬಿ. ಮುನೇಗೌಡ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮರುಡಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ, ಶಿರಸ್ತೇದಾರ್‌ ಬಾಲಕೃಷ್ಣ, ಯಾದವ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ರಘು, ಉಪಾಧ್ಯಕ್ಷ ವಿ. ಮುನಿರಾಜು, ಪ್ರಧಾನಕಾರ್ಯದರ್ಶಿ ಎಂ. ಅಣ್ಣಪ್ಪ, ಖಜಾಂಚಿ ಶ್ರೀಧರಮೂರ್ತಿ, ಸಹಕಾರ್ಯದರ್ಶಿ ಆನಂದ್‌, ಸಂಘಟನಾ ಕಾರ್ಯದರ್ಶಿ ಎಂ. ವೆಂಕಟೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT