‘ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿ ನನ್ನ ಸಂಘಟನೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಎಲ್ಲ ಸಮುದಾಯದ ಜನರು ನನ್ನ ನಾಯಕತ್ವವನ್ನು ಒಪ್ಪಿಕೊಂಡರು. ನನ್ನೊಳಗೆ ನೀಲಿ ಮಾತ್ರ ಇತ್ತು, ಈಗ ಕೆಂಪು ನನ್ನ ರಕ್ತವಾಗಿದೆ, ಹಸಿರು ಉಸಿರಾಗಿದೆ. ಈ ಗೆಲುವು ಜನ ಚಳವಳಿಗಳಿಗೆ ಶಕ್ತಿ ತುಂಬಲಿ.
ಕಾರಳ್ಳಿ ಶ್ರೀನಿವಾಸ್, ಸಂಚಾಲಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ
‘ಸಿದ್ದರಾಮಯ್ಯ ಅವರು ಕೊಟ್ಟ ಮಾತು ಉಳಿಸಿ ಕೊಂಡಿದ್ದಾರೆ. ನಾವು ಕೃಷಿಯನ್ನು ಬಿಡುವುದಿಲ್ಲ. ಈಗ ನಮ್ಮ ಭೂಮಿ ನಮ್ಮ ಕೈಲಿದೆ, ಅದರಲ್ಲಿ ಬೆಳೆಯನ್ನು ಬೆಳೆದು ಜೀವನ ನಡೆಸುತ್ತೇವೆ. ಇಡೀ ರಾಜ್ಯದ ಜನ ಸಂಘಟನೆಗಳು, ಜನರು ನಮ್ಮ ಜೊತೆಗೆ ನಿಂತರು. ಅವರಿಗೆ ಧನ್ಯವಾದ ಹೇಳುತ್ತೇವೆ.