ಮಂಗಳವಾರ, ಆಗಸ್ಟ್ 4, 2020
24 °C

ಲಯನ್ಸ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಹೊಸಕೋಟೆ ಲಯನ್ಸ್ ಸಂಸ್ಥೆಯ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಚ್.ಸಿ. ಷಣ್ಮುಗಂ ಆಯ್ಕೆಯಾಗಿದ್ದಾರೆ. ಹಿಂದಿನ ಅದ್ಯಕ್ಷ ಸಿ.ಜಯರಾಜ್ ಅಧಿಕಾರ ಹಸ್ತಾಂತರಿಸಿದರು. ಲಯನ್ಸ್ ಸಂಸ್ಥೆಯ ಉಪ ರಾಜ್ಯಪಾಲ ಬಿ.ಎಸ್. ರಾಜಶೇಖರಯ್ಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಾಂತೀಯ ಅಧ್ಯಕ್ಷ ರಾಮನಾಥ್, ಜಿ.ಎಸ್. ಮಂಜುನಾಥ್, ವಿ.ಎನ್. ಮಂಜುನಾಥ್ ಇದ್ದರು.

ಈ ಸಂದರ್ಭದಲ್ಲಿ ಹೊಸಕೋಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಲಯನ್ಸ್ ಸಂಸ್ಥೆ ಸ್ವಯಂ ಚಾಲಿತ ಸ್ಯಾನಿಟೈಸರ್‌ ಡಿಸ್ಪೆನ್ಸರ್‌ ಉಪಕರಣವನ್ನು ಕೊಡುಗೆಯಾಗಿ ನೀಡಿದರು.

ಪದಾಧಿಕಾರಿಗಳು:  ಎಚ್.ಸಿ. ಷಣ್ಮುಗಂ(ಅಧ್ಯಕ್ಷ), ಎಂ.ವೆಂಕಟಸ್ವಾಮಿ, ಜೆ.ಸತೀಶ್‌ ಮತ್ತು ಮುನಿಯಪ್ಪ (ಉಪಾಧ್ಯಕ್ಷರು). ಎಸ್. ಮಹೇಶ್ (ಕಾರ್ಯದರ್ಶಿ), ವಿ.ಎಸ್.ಮಂಜುನಾಥ್ (ಖಜಾಂಚಿ) ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.