ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ ಕರಗ ಹೊತ್ತಿದ್ದ ಮಹೇಶ್ ನಿಧನ

Published 13 ಮೇ 2024, 16:02 IST
Last Updated 13 ಮೇ 2024, 16:02 IST
ಅಕ್ಷರ ಗಾತ್ರ

ಹೊಸಕೋಟೆ: ಇತಿಹಾಸ ಪ್ರಸಿದ್ದ ಹೊಸಕೋಟೆ ಕರಗ ಮಹೋತ್ಸವದಲ್ಲಿ ನಾಲ್ಕು ಬಾರಿ ಕರಗ ಹೊತ್ತಿದ್ದ ಕೋಟೆ ಬಡಾವಣೆಯ ಗವಿ ರಸ್ತೆ  ನಿವಾಸಿ ಸಿ.ಮಹೇಶ್ (66) ಸೋಮವಾರ ಉಸಿರಾಟದ ತೊಂದರೆಯಿಂದ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಸೋಮವಾರ ಸಂಜೆ ಹೊಸಕೋಟೆಯಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿವಿಧ ಧಾರ್ಮಿಕ ಕೇಂದ್ರ, ಕ್ಷೇತ್ರಗಳಿಗೆ ಪಾದಯಾತ್ರೆ ಮೂಲಕ ಪ್ರವಾಸ ಕೈಗೊಳ್ಳುವ ಹವ್ಯಾಸ ಹೊಂದಿದ್ದ ಮಹೇಶ್ ಐದು ಬಾರಿ ಕಾಶಿ ಯಾತ್ರೆ ಕೈಗೊಂಡಿದ್ದರು. ಧರ್ಮಸ್ಥಳ, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆಯಲ್ಲಿ ತೆರಳಿದ್ದರು. ಕೆಲವು ತಿಂಗಳ ಹಿಂದೆ ಪಾದಯಾತ್ರೆ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಗಾಯಗೊಂಡಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT