ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ| ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಭಾರಿ ಜನ

ಜನರನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
Last Updated 3 ಮಾರ್ಚ್ 2023, 11:35 IST
ಅಕ್ಷರ ಗಾತ್ರ

ದೇವನಹಳ್ಳಿ: ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ.

ಊಟ ವಿತರಿಸುವ ಸ್ಥಳದಲ್ಲಿ ವಿಪರೀತ ಜನಸಂದಣಿ ಯಿಂದ ಉಂಟಾದ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಊಟ ಮಾಡಲು ಬಂದವರು ಪೊಲೀಸರ ಲಾಠಿ ರುಚಿ ನೋಡಿ ದಿಕ್ಕಾಪಾಲಾಗಿ ಓಡಿದರು. ನಂತರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ಮಹಿಳೆಯರು, ವೃದ್ದರು ಎಂದು ನೋಡದೆ ಪೊಲೀಸರು ಲಾಠಿ ಯಿಂದ ಮನಬಂದಂತೆ ಹೊಡೆದಿದ್ದಾರೆ. ಹೊಡೆದ ಜಾಗವನ್ನು ತೋರಿಸಲೂ ಆಗದು. ಅಂಥ ಕಡೆಗಳಲ್ಲಿ ಬಾಸುಂಡೆ ಬರುವಂತೆ ಬಾರಿಸಿದ್ದಾರೆ ' ಎಂದು ಏಟು ತಿಂದ ವೃದ್ಧರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಸ್ಥಳಕ್ಕೆ ಆಗಮಿಸಿದ್ದು, ಜನರನ್ನು ಸಮಾಧಾನ ಮಾಡಲು ಮುಂದಾದರು. ಅವರೊಂದಿಗೆ
ದೇವನಹಳ್ಳಿ ಟೌನ್‌ ಪೊಲೀಸ್‌ ಠಾಣೆಯ ಎಸಿಪಿ ಬಾಲಕೃಷ್ಣ ಕೂಡ ಜನರನ್ನು ಸಮಾಧಾನ ಪಡಿಸಿ ಕಳಿಸಿದರು.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಕುಂದಾಣ, ವಿಜಯಪುರ, ಹೋಸಕೋಟೆಯಿಂದ ಬರುತ್ತಿರುವ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಸಕಲ ಪ್ರಯತ್ನ ಮಾಡುತ್ತಿದ್ದರೂ, ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಪಟ್ಟಣದ ರಾಣಿ ಸರ್ಕಲ್, ಕೆಂಪೇಗೌಡ ಸರ್ಕಲ್, ವಿಜಯಪುರ, ಯಲಹಂಕ ದಾರಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಬಸ್‌ಗಳಲ್ಲಿ ಹೊರವಲಯದಲ್ಲಿ ಬಂದಿಳಿದ ಸಾವಿರಾರು ಜನರು ಅಲ್ಲಿಂದ ನಡೆದುಕೊಂಡು ದೇವನಹಳ್ಳಿ ಟೌನ್‌ನ ಕಾರ್ಯಕ್ರಮ ಸ್ಥಳಕ್ಕೆ ಧಾವಿಸಿದರು. ರಸ್ತೆಗಳು ಜನರಿಂದ ತುಂಬಿ ಹೋಗಿವೆ. ವಾಹನ ಸಂಚರಿಸಲು ಜಾಗ ಇಲ್ಲದೆ ಸವಾರರು ಪರದಾಡುತ್ತಿದ್ದಾರೆ. ಪೊಲೀಸರು ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಚೆಲ್ಲಿದ್ದಾರೆ.

ಇನ್ನೂ ದೂರದ ಊರಿನಿಂದ ಬಂದಂತಹ ಜನರಿಗೆ ಗುರುಭವನ ಸೇರಿದಂತೆ ವಿವಿಧೆಡೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಉಪಿಟ್ಟು, ಕೆಸರಿಬಾತ್‌, ವಡೆ ಪ್ಯಾಕೆಟ್ ಜೊತೆ ಚಿಕ್ಕ ನೀರಿನ ಪ್ಲಾಸ್ಟಿಕ್‌ ಕವರ್‌ ನೀಡಲಾಗಿತ್ತು.

ಜೂನಿಯರ್‌ ಕಾಲೇಜು ಕ್ರೀಡಾಂಗಣದಲ್ಲಿ ಬಿಗಿ ಬಂದೋಬಸ್ತ್‌ ಮಾಡಿದ್ದು, ಮುಖ್ಯದ್ವಾರದಲ್ಲಿ ತೀವ್ರ ತಪಾಸಣೆಯ ನಂತರವೇ ಜನರನ್ನು ಒಳಗೆ ಬಿಡಲಾಗುತ್ತಿದೆ.

ವೇದಿಕೆಯ ಮುಂಭಾಗದಲ್ಲಿ ಮೀಸಲಾಗಿರುವ ಆಸನಗಳಿಗೆ ಈಗಾಗಲೇ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT