ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಹಾಲು ಉತ್ಪಾದನೆ: ಪ್ರಥಮ ಸ್ಥಾನ ಗುರಿ

ಧರ್ಮಪುರ ಡೇರಿ: ಹಾಲು ಉತ್ಪಾದಕರ ಸಭೆ
Published 13 ಫೆಬ್ರುವರಿ 2024, 14:37 IST
Last Updated 13 ಫೆಬ್ರುವರಿ 2024, 14:37 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ ಡೇರಿಯ ಆವರಣದಲ್ಲಿ ಮಂಗಳವಾರ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಹಾಲು ಉತ್ಪಾದಕರ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಹಾಲು ಉತ್ಪಾದನೆಯಲ್ಲಿ ದಿನಕ್ಕೆ 3,500 ಲೀಟರ್ ಹಾಲು ಉತ್ಪಾದಿಸುವ ಮೂಲಕ 2ನೇ ಸ್ಥಾನದಲ್ಲಿರುವ ಡೇರಿ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಹೆಚ್ಚು ಹಾಲು ಉತ್ಪಾದನೆ ಜತೆಗೆ ಹಾಲು ಗುಣಮಟ್ಟದಿಂದ ಕೂಡಿರುವಂತೆ ಉತ್ಪಾದಕರು ಗಮನಹರಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಗ್ರಾಮೀಣ ಭಾಗದ ರೈತರ ಪಾಲಿಗೆ ವರದಾನವಾಗಿರುವ ಹೈನು ಉದ್ಯಮವನ್ನು ಮತ್ತಷ್ಟು ಬೆಳೆಸಬೇಕಾಗಿದೆ. ಒಕ್ಕೂಟದಿಂದ ಸಿಗುವಂತಹ ಎಲ್ಲಾ ಸೌಲಭ್ಯವನ್ನು ಉತ್ಪಾದಕರಿಗೆ ತಲುಪಿಸಿ, ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದರು.

ಮುಖಂಡ ಸಿ.ಎಂ.ಕೃಷ್ಣಪ್ಪ ಮಾತನಾಡಿ, ಸಂಘವು, ಆರ್ಥಿಕವಾಗಿ ಸದೃಢವಾಗಲು ಸಂಘದ ಆಡಳಿತ ಮಂಡಳಿ ಗಮನಹರಿಸಬೇಕು. ಬಮೂಲ್ ಒಕ್ಕೂಟವು ಸಂಘಕ್ಕೆ ಚೈತನ್ಯ ಕೊಡುವಂತಹ ಕೆಲಸ ಮಾಡಬೇಕು. ಕಟ್ಟಡದ ದುರಸ್ತಿಗಾಗಿ ಅನುದಾನ ಬಿಡುಗಡೆ ಮಾಡಿಕೊಡಬೇಕು. ಸಂಘಕ್ಕೆ ಆದಾಯದ ಮೂಲವನ್ನು ಮಾಡಲು ಸಹಕಾರ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಮಾಡಲಾಗುತ್ತದೆ ಎಂದರು.

ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಿ.ಮುನಿರಾಜುಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವ ಸಂಘವನ್ನು ‘ಎ’ ವಲಯಕ್ಕೆ ತೆಗೆದುಕೊಂಡು ಹೋದರೆ, ಒಕ್ಕೂಟದಲ್ಲಿ ಸಂಘಕ್ಕೆ ಪ್ರತ್ಯೇಕ ಬಜೆಟ್ ಸಿಗಲಿದ್ದು, ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದರು.

ಡೇರಿ ಉಪಾಧ್ಯಕ್ಷ ಮುನಿಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಚಿಕ್ಕಪಿಳ್ಳಣ್ಣ, ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಜಗನ್ನಾಥ್, ಶಾಂತಕುಮಾರ್, ಕೆ.ಆರ್.ನಾಗೇಶ್, ಶಿವಕುಮಾರ್, ದಿನ್ನೂರು ವೆಂಕಟೇಶ್, ಡೇರಿ ನಿರ್ದೇಶಕರಾದ ರಾಮಚಂದ್ರಪ್ಪ, ಅರುಣ್ ಕುಮಾರ್, ಸುಬ್ಬಣ್ಣ, ಕೇಶವ, ಮುನಿಶಾಮಪ್ಪ, ಹೊನ್ನೇಗೌಡ, ಮುನಿಕೃಷ್ಣ, ಮಾಲಾ, ಮುನಿಯಮ್ಮ, ಮುಖಂಡರಾದ ಗೋವಿಂದಪ್ಪ, ಮುನಿಶಾಮಿಗೌಡ, ರವಿ, ರಾಜಣ್ಣ, ಎನ್‌ಎಸ್‌ಯುಐ ಅಧ್ಯಕ್ಷ ಶಶಿಕುಮಾರ್, ಡಿ.ಎಂ.ಸುಬ್ಬಣ್ಣ, ಸಲ್ಲಪ್ಪ, ಮಹೇಂದ್ರ, ಪಿ.ಮಂಜಣ್ಣ, ಗಂಗರಾಜ್, ಮುನೇಗೌಡ, ಮನೋಹರ್, ಆಂಜಿನಪ್ಪ, ಚೇತನ್, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT