ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಗುಡಿಯಲ್ಲಿ ಸುಧಾಕರ್‌ ಪರ ಎಂಟಿಬಿ ಪ್ರಚಾರ

Published 17 ಏಪ್ರಿಲ್ 2024, 17:01 IST
Last Updated 17 ಏಪ್ರಿಲ್ 2024, 17:01 IST
ಅಕ್ಷರ ಗಾತ್ರ

ಹೊಸಕೋಟೆ: ಬಿಜೆಪಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ವಿಧಾನ ಪರಿಷತ್ ಸದಸ್ಯ‌ ಎಂಟಿಬಿ ನಾಗರಾಜ್ ಅವರು ತಾಲ್ಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಶಿವನಾಪುರ ಗ್ರಾಮದ ವಹ್ನಿಕುಲ ದ್ರೌಪದಮ್ಮ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ಮಾಲೂರು ಕ್ಷೇತ್ರದ ಹೂಡಿ ವಿಜಯಕುಮಾರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುವ ಕುರಿತು ಈಗಾಗಲೇ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ವಿಜಿಯೇಂದ್ರ ಅವರು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ಯಾವುದೇ ಗೊಂದಲ ಬೇಡ ಎಂದರು.

ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮಾತನಾಡಿ, ವಹ್ನಿಕುಲ ಕ್ಷತ್ರೀಯ ಜನಾಂಗದವರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗುವುದು. ಎಂದಿನಂತೆ ಈ ಚುನಾವಣೆಯಲ್ಲಿಯೂ ವಹ್ನಿಕುಲ ಸಮುದಾಯ ಬಿಜೆಪಿ ಪಕ್ಷದ ಬೆನ್ನಿಗೆ ಇರಬೇಕು ಎಂದು ಮನವಿ ಮಾಡಿದರು.

ಜಿ.ಪಂ ಮಾಜಿ ಸದಸ್ಯ ಸಿ.ನಾಗರಾಜ್, ಬೆಂಂಗಳೂರು ಹಾಲು ಒಕ್ಕೂಟ್ ನಿರ್ದೇಶಕ ಸಿ.ಮಂಜುನಾಥ್, ಯುವ ಮುಖಂಡ ಕಿರಣ್ ಕುಮಾರ್, ವಹ್ನಿಕುಲ ಮುಖಂಡ ಲಕ್ಷ್ಮಣ್, ತಿಗಳ ಸಂಘದ ನಿರ್ದೇಶಕ ಪುಟ್ಟರಾಜು, ಶಿವನಾಪುರ ಪುಟ್ಟರಾಜು, ಹನುಮಂತಗೌಡ, ಸೇರಿದಂತೆ ಹಲವು ಬಿಜೆಪಿ ಮುಖಂಡರುಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT