ಬುಧವಾರ, ಏಪ್ರಿಲ್ 21, 2021
30 °C

ನಗರಸಭೆ ಮೀಸಲಾತಿ ಪ್ರಕಟ: ಹೈಕೋರ್ಟ್‌ ಮಾರ್ಗ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಎಲ್ಲ ಗೊಂದಲಗಳ ನಂತರ ಹೈಕೋರ್ಟ್‌ ಆದೇಶದಂತೆ ರಾಜ್ಯ ಪತ್ರದಲ್ಲಿ ನಗರಸಭೆ 31 ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.

ನಿಯಮದಂತೆ ಮೀಸಲಾತಿ ಪಟ್ಟಿ ಮಾಡಿಲ್ಲ ಎನ್ನುವ ಕಾರಣ ಹಾಗೂ ವಾರ್ಡ್‌ಗಳ ಗಡಿ ಗುರುತಿಸುವಿಕೆ ಗೊಂದಲ ಕುರಿತು ನಗರದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಸತತ ಎರಡು ವರ್ಷಗಳ ವಿಚಾರಣೆ ನಂತರ ಈಗಷ್ಟೇ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗದ ಕಾರಣದಿಂದಾಗಿಯೇ ಒಂದು ವಾರದ ಹಿಂದೆಯಷ್ಟೇ ಚುನಾವಣ ಆಯೋಗ ನಗರಸಭೆ ಚುನಾವಣ ದಿನಾಂಕ ಘೋಷಣೆ ಮಾಡಿ ಮತ್ತೆ ಹಿಂದಕ್ಕೆ ಪಡೆದಿತ್ತು.

ಮೀಸಲಾತಿ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಚುನಾವಣ ದಿನಾಂಕ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು