ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವೆಚ್ಚ ವಿವರ ಸಲ್ಲಿಸದ ಆರೋಪ: ನಗರಸಭೆಗೆ ಸ್ಪರ್ಧಿಸಿದ್ದ 9 ಮಂದಿ ಅನರ್ಹ

ಅನರ್ಹ
Published 10 ಅಕ್ಟೋಬರ್ 2023, 15:47 IST
Last Updated 10 ಅಕ್ಟೋಬರ್ 2023, 15:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರಸಭೆಗೆ 2021ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾವಣೆ ವೆಚ್ಚದ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಒಂಬತ್ತು ಜನ ಅಭ್ಯರ್ಥಿಗಳನ್ನು ಮೂರು ವರ್ಷ ಅವಧಿಗೆ ಅನರ್ಹಗೊಳಿಸಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಆದೇಶದಲ್ಲಿ ತಿಳಿಸಿರುವಂತೆ ದೊಡ್ಡಬಳ್ಳಾಪುರ ನಗರಸಭೆ ಸಾರ್ವತ್ರಿಕ ಚುನಾವಣೆ ವೆಚ್ಚದ ವಿವರ ಕರ್ನಾಟಕ ಪುರಸಭೆ ಅಧಿನಿಯಮ 1964ರ ಪ್ರಕರಣ 16(ಸಿ) ಅನ್ವಯ ಚುನಾವಣೆಯಲ್ಲಿ ಆಯ್ಕೆಯಾದ ಪರಾಭವಗೊಂಡ ಎಲ್ಲ ಸ್ಪರ್ಧಿಗಳು ಲೆಕ್ಕಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ, ಪರಾಭವಗೊಂಡಿದ್ದ ಒಂಬತ್ತು ಮಂದಿ ಸ್ಪರ್ಧಿಗಳು ಲೆಕ್ಕಪತ್ರಗಳ ವಿವರ ಸಲ್ಲಿಸಿರಲಿಲ್ಲ.

 ಕೆ.ವಿ.ನಾಗೇಶ್‌ ದೇವರಾಜನಗರ, ಸೈಯ್ಯದ್ ನಾಜೀಮ್ ಉಲ್ಲಾ ಚಿಕ್ಕಪೇಟೆ, ಸುಶೀಲ್ ವಿ.ಪುಟ್ಟಾಣಿ ಸೋಮೇಶ್ವರ ಬಡಾವಣೆ, ವೀಣಾ ಶಿವರಾಜ್ ಇಸ್ಲಾಂಪುರ, ಎಂ.ಎಸ್‌. ಪಾರ್ವತಮ್ಮ ಕರೇನಹಳ್ಳಿ, ಆಂಜಿನಪ್ಪ ರೋಜಿಪುರ, ಮೊಹಮ್ಮದ್ ನಿಸಾರ್ ತ್ಯಾಗರಾಜ ನಗರ, ಕೆ.ಎಂ.ರಾಣೆ ಡಿ.ಕ್ರಾಸ್, ಕೆರೆಮುಲು ಬದ್ರಿ ಸಂಜಯನಗರ ಇವರನ್ನು ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT