ಗುರುವಾರ , ಜುಲೈ 29, 2021
22 °C
ಆನ್‌ಲೈನ್‌ ಶಿಕ್ಷಣಕ್ಕೆ ಮೊಬೈಲ್‌, ಲ್ಯಾಪ್‌ಟಾಪ್‌ ಖರೀದಿ

ಸಾಲಕ್ಕಾಗಿ ಪೋಷಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಒಂದು ಕಡೆ ಸರ್ಕಾರವು ಆನ್‌ಲೈನ್‌ ಶಿಕ್ಷಣವನ್ನು ಕಡ್ಡಾಯ ಮಾಡುತ್ತಲ್ಲ ಚಿಂತನೆ ನಡೆಸಿದೆ. ದಿನಗೂಲಿ ಮಾಡಿಕೊಂಡು, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಪೋಷಕರು ಲ್ಯಾಪ್‌ಟಾಪ್‌, ಮೊಬೈಕ್‌ ಖರೀದಿಗಾಗಿ ಸಾಲ ಮಾಡಲು ಮುಂದಾಗಿದ್ದಾರೆ.

ನಾವು ಕಷ್ಟಪಟ್ಟಿದ್ದು ಸಾಕು, ನಮ್ಮ ಮಕ್ಕಳಾದರೂ ಓದಿ, ವಿದ್ಯಾವಂತರಾಗಬೇಕು ಎಂಬ ಕನಸು ಹೊತ್ತ ಬಡ ಪೋಷಕರು ಇಂದು ಆತಂಕಕ್ಕೆ ಒಳಗಾಗಿದ್ದಾರೆ.

ಒಂದೆಡೆ, ಕೋವಿಡ್‌ನಿಂದಾಗಿ ಉದ್ಯೋಗ ನಷ್ಟದ ಭಯ. ಸಣ್ಣ, ಮಧ್ಯಮ ಉದ್ಯಮ ಸಂಕಷ್ಟದಲ್ಲಿದೆ. ಜನರು ಆರ್ಥಿಕವಾಗಿ ಬಹಳ ಕುಗ್ಗಿ ಹೋಗಿದ್ದಾರೆ. ಇನ್ನೊಂದೆಡೆ ಹೆಚ್ಚುವರಿಯಾಗಿ ಆನ್‌ಲೈನ್‌ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡುವ ಪರಿಸ್ಥಿತಿ ಬಂದೊದಗಿದೆ. ಇದೆಲ್ಲವನ್ನು ಮಾಡಲಿಲ್ಲ ಎಂದಾದರೆ, ನಮ್ಮ ಮಕ್ಕಳು ಎಲ್ಲಿ ಶಿಕ್ಷಣ ವಂಚಿತರಾಗುತ್ತಾರೋ ಎನ್ನುವ ಭಯದಿಂದ ಬಡ ಪೋಷಕರು, ಬ್ಯಾಂಕುಗಳಲ್ಲಿ ಸಾಲ ಮಾಡಲು ಮುಂದಾಗಿದ್ದರೆ, ಕೆಲವರು ತಮ್ಮ ಆಭರಣ, ಮನೆ ಹೊಲಗಳನ್ನು ಅಡವಿಡಲು ಮುಂದಾಗಿದ್ದಾರೆ.

ಹಲವು ಖಾಸಗಿ ಶಾಲಾ- ಕಾಲೇಜುಗಳು ಈಗಾಗಲೇ ಆನ್‌ಲೈನ್‌ ತರಗತಿ ಆರಂಭವಾಗಿದ್ದು, ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ  ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿವೆ. ಇದೊಂದಿಗೆ ಶಿಕ್ಷಣ ಸಂಸ್ಥೆಗಳು, ಆನ್‌ಲೈನ್‌ ತರಗತಿ ಹೆಸರಿನಲ್ಲಿ ಶಾಲಾ ಶುಲ್ಕವನ್ನೂ ಹೆಚ್ಚಿಸಿದೆ. ಇದೂ ಸಹ ಪೋಷಕರಿಗೆ ಹೊರೆಯಾಗಿ ಪರಿಣಮಿಸಿದೆ.

‘ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಖರೀದಿಗೆ ಬ್ಯಾಂಕ್‌ಗಳು ವೈಯಕ್ತಿಕ ಸಾಲ ನೀಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ ಶೇ 12 ಹಾಗೂ ಸಹಕಾರಿ ವಲಯದ ಬ್ಯಾಂಕ್‌ಗಳಲ್ಲಿ ಶೇ 10 ಇದೆ. ಹಾಗಾಗಿ, ಈ ಬ್ಯಾಂಕ್‌ಗಳಿಗೆ ಪೋಷಕರು ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕರಿಗೆ ಬ್ಯಾಂಕುಗಳ ಪರಿಚಯವೂ ಇಲ್ಲ. ಆದ್ದರಿಂದ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ’ ಎಂದು ಪೋಷಕ ನಟರಾಜ್ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.