ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮೌನ ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾಡಳಿತ, ಕಲುಷಿತ ನೀರು ತೆರವು

Published 7 ಫೆಬ್ರುವರಿ 2024, 14:05 IST
Last Updated 7 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಕೊಡಿಗೇಹಳ್ಳಿ ಸಮೀಪದ ಮೇಸ್ಟ್ರು ಮನೆ ಕ್ರಾಸ್‌ನ ಅರಳುಮಲ್ಲಿಗೆ ಕೆರೆಯ ಪ್ರಮುಖ ರಾಜಕಾಲುವೆ ಬಳಿ ಸುರಿದಿದ್ದ ಕಲುಷಿತ ತ್ಯಾಜ್ಯ ನೀರನ್ನು ಮಂಗಳವಾರ ಟ್ಯಾಂಕರ್‌ಗಳ ಮೂಲಕ ಹೊರಗೆ ಸಾಗಿಸಲಾಯಿತು.

ಕೈಗಾರಿಕೆಗಳ ರಾಸಾಯನಿಕ ಯುಕ್ತ ಕಲುಷಿತ ತ್ಯಾಜ್ಯ ನೀರನ್ನು ಟ್ಯಾಂಕರ್‌ಗಳ ಮೂಲಕ ತಂದು ರಾತ್ರಿ ವೇಳೆ ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಕೊಡಿಗೇಹಳ್ಳಿ ಸಮೀಪದ ಮೇಸ್ಟ್ರು ಮನೆ ಕ್ರಾಸ್‌ನ ಅರಳುಮಲ್ಲಿಗೆ ಕೆರೆಯ ಪ್ರಮುಖ ರಾಜಕಾಲುವೆ ಬಳಿ ಸುರಿದು ಹೋಗಿದ್ದನ್ನು ತೆರವುಗೊಳಿಸುವಂತೆ ಸೋಮವಾರ ಯುವ ಸಂಚಲನ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಂಗಳವಾರ 40 ಟ್ಯಾಂಕರ್‌ಗಳಷ್ಟು ಕಲುಚಿತ ತ್ಯಾಜ್ಯ ನೀರನ್ನು ಹೊರಸಾಗಿಸಿದ್ದಾರೆ.

ಕಲುಷಿತ ನೀರನ್ನು ಹೊರಗೆ ಸಾಗಿಸುವಾಗ ಯಾವುದೇ ಇಲಾಖೆಯ ಸಿಬ್ಬಂದಿಗಳು ಸಹ ಮುಂದೆ ನಿಂತು ವೈಜ್ಞಾನಿಕವಾಗಿ ಕಾರ್ಯಾ ನಡೆಯುತ್ತಿದೆಯೆ ಎನ್ನುವ ಬಗ್ಗೆ ಗಮನಿಸದೆ ಇರುವುದು ಬೇಜವಾಬ್ದಾರಿತನವಾಗಿದೆ ಎಂದು ದೂರಿರುವ ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ನಮ್ಮ ಮೌನ ಪ್ರತಿಭಟನೆಯ ಮೂರು ಉದ್ದೇಶಗಳಲ್ಲಿ ಇನ್ನು ಎರಡು ಉದ್ದೇಶಗಳು ಈಡೇರಿಲ್ಲ. ಇವುಗಳ ಕುರಿತು ಸಹ ಇಲಾಖೆಯವರು ಗಮನಹರಿಸಬೇಕು. ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಮುಂದೆಯು ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT