ರೈತ ತೆಲಗರಹಳ್ಳಿ ರಮೇಶ್ ಮಾತನಾಡಿ, ‘ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಆನೆಗಳ ದಾಳಿಯಿಂದಾಗಿ ಹಾಳಾಗುತ್ತಿದೆ. ಪ್ರತಿದಿನ ರೈತರು ನಿದ್ದೆಗೆಟ್ಟು ಬೆಳೆ ಕಾಯಬೇಕಾಗಿದೆ. ಕಳೆದ ಒಂದು ತಿಂಗಳಿನಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಬೆಳೆ ಹಾನಿಯ ಪರಿಹಾರ ನೀಡುತ್ತಿಲ್ಲ. ಹಾಗಾಗಿ ವಣಕನಹಳ್ಳಿ, ಸೋಲೂರು, ಸುಣವಾರ, ತೆಲಗರಹಳ್ಳಿ, ಇಂಡ್ಲವಾಡಿ, ಮೆಣಸಿಗನಹಳ್ಳಿ ಭಾಗದ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದರು.