ವಿಜಯಪುರ(ದೇವನಹಳ್ಳಿ): ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಸಂಜೆ ಸುರಿದ ಹದ ಮಳೆ ರೈತರಿಗೆ ಹರ್ಷ ತಂದಿದೆ.

ಹೆಚ್ಚಿನ ರೈತರು ಈಗಾಗಲೇ ರಾಗಿ, ಜೋಳ, ತೊಗರಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆಯಿಂದಾಗಿ ಬಿತ್ತನೆ ಮಾಡಿದ ಭೂಮಿಯಲ್ಲಿ ತೇವಾಂಶ ಕೊರತೆ ಎದುರಾಗಿತ್ತು. ಇದರಿಂದ ಬೆಳೆ ಮೊಳಕೆ ಒಡೆದಿರಲಿಲ್ಲ.ಇದು ರೈತರ ಆತಂಕಕ್ಕೆ ಕಾರಣವಾಗಿತ್ತು.

ಸರಿಯಾದ ವೇಳೆಗೆ ಸುರಿದ ಹದವಾದ ಮಳೆ ಬಿತ್ತನೆ ಬೆಳೆಗಳು ಮೊಳಕೆಯೊಡೆಯಲು ಅನುಕೂಲವಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸರಿಯಾಗಿ ಸಂಜೆ ಶಾಲೆ ಬಿಡುವ ವೇಳೆ ಜಿಟಿ ಮಳೆ ಶುರುವಾದ ಕಾರಣ ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನದು ಮನೆಗೆ ಮರಳಿದರು.

ಸೋಮವಾರದಿಂದ ಬಯಲುಸೀಮೆಯಲ್ಲಿ ಮಲೆನಾಡು ವಾತಾವರಣ ನಿರ್ಮಾಣವಾಗಿದ್ದು ಜನರು ಸ್ವೇಟರ್, ಮಫ್ಲರ್, ರೈನ್ಕೋಟ್ ಹಾಗೂ ಛತ್ರಿ ಹೊರ ತೆಗೆದಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.