ಅರ್ಚಕರ ಸಂಘದ ಕ್ಯಾಲೆಂಡರ್ ಬಿಡುಗಡೆ

7

ಅರ್ಚಕರ ಸಂಘದ ಕ್ಯಾಲೆಂಡರ್ ಬಿಡುಗಡೆ

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಗರದ ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.

ತಹಶೀಲ್ದಾರ್ ಬಿ.ಎ.ಮೋಹನ್ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ‘ಲೋಕಲ್ಯಾಣವನ್ನು ಬಯಸುವ ಆಗಮಿಕರು ಸಂಘಟನಾತ್ಮಕವಾಗಿ ಒಂದಾಗುವುದು ಉತ್ತಮ ಬೆಳವಣಿಗೆ. ತಸ್ತಿಕ್ ವಿಳಂಬ ಸೇರಿದಂತೆ ಆಗಮಿಕರ ಮನವಿಗಳನ್ನು ಪುರಸ್ಕರಿಸಿ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಕ್ರಮ ಕೈಗೊಳ್ಳುವೆ’ ಎಂದು ತಿಳಿಸಿದರು.

ತಾಲ್ಲೂಕಿನ ಮುಜರಾಯಿ ದೇವಾಲಯಗಳ ಅರ್ಚಕರ ಮಕ್ಕಳ ಆಗಮ ವೇದ ಅಧ್ಯಯನ ತರಗತಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸೋಮೇಶ್ವರ ದೇವಾಲಯದ ಹಿಂಭಾಗದ ಕೊಠಡಿಯನ್ನು ತಹಶೀಲ್ದಾರ್ ಸಮಕ್ಷಮದಲ್ಲಿ ಅರ್ಚಕರ ಸಂಘಕ್ಕೆ ನೀಡಲಾಯಿತು. ಈ ಸಂಬಂಧ ಕೊಠಡಿಯ ಬೀಗದ ಕೈ ಹಸ್ತಾಂತರಿಸಲಾಯಿತು.

ಸೋಮೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಜಿ.ಎಸ್.ಉಮಾಶಂಕರ್, ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ರಾಘವನ್, ಅಧ್ಯಕ್ಷ ಕೆ.ವಿ.ಸುರೇಶ್ ಮೂರ್ತಿ, ಉಪಾಧ್ಯಕ್ಷ ವೇದಮೂರ್ತಿ, ಟಿ.ಎಸ್.ಸೋಮಶೇಖರ್ ಆರಾಧ್ಯ ಶಾಸ್ತ್ರಿ ಹಾಗೂ ಸಂಘದ ಪದಾಧಿಕಾರಿಗಳು ಅರ್ಚಕರು ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !