ಸರ್ಜಾಪುರ (ಆನೇಕಲ್): ಸರ್ಜಾಪುರ ಸಮೀಪದ ಎಸ್.ಮೇಡಹಳ್ಳಿ ರೈತರು ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ‘ಸ್ಟಾಪ್ ಸ್ವೀಫ್ಟ್ ಸಿಟಿ’ ಫಲಕಗಳನ್ನು ಹಿಡಿದು ಮಾನವ ಸರವಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಮೇಡಹಳ್ಳಿಯ ಮುಖ್ಯ ರಸ್ತೆಯಲ್ಲಿ ಜಮಾವಣೆಗೊಂಡು ನೂರಾರು ಮಂದಿ ರೈತರು ‘ಗೋಮಾಳ ಉಳಿಸಿ ಗೋಮಾತೆ ರಕ್ಷಿಸಿ’, ‘ಕೃಷಿಯನ್ನು ವಿನಾಶದ ಅಂಚಿಗೆ ತಳ್ಳದಿರಿ’, ‘ಅಕ್ರಮ ಭೂಸ್ವಾಧೀನ ವಿರೋಧಿಸಿ ನಮ್ಮ ಹೋರಾಟ, ನಮ್ಮ ಭೂಮಿ ನಮ್ಮ ಹಕ್ಕು’, ‘ಕೆಐಎಡಿಬಿಗೆ ಧಿಕ್ಕಾರ’, ‘ಭ್ರಷ್ಟ ಅಧಿಕಾರಿಗಳೇ ಕೃಷಿ ಭೂಮಿ ಬಿಟ್ಟು ತೊಲಗಿ’ ಎಂಬಿತ್ಯಾದಿ ಫಲಕ ಹಿಡಿದು ಘೋಷಣೆ ಕೂಗಿದರು.

ಕೃಷಿ ಭೂಮಿಯನ್ನು ನಂಬಿರುವ ರೈತರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಭೂಮಿಯನ್ನೇ ನಂಬಿ ನೂರಾರು ಮಂದಿ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿಯ ಬೆಳೆಗಳನ್ನು ನಂಬಿ ನಮ್ಮ ಕುಟುಂಬವಿದೆ. ಆದರೆ ಅಭಿವೃದ್ಧಿ, ಕೈಗಾರಿಕೆಗಳ ಹೆಸರಿನಲ್ಲಿ ನಮ್ಮ ಜಮೀನುಗಳನ್ನು ಕಸಿಯಲು ಯತ್ನಿಸುತ್ತಿರುವುದು ಖಂಡನೀಯ ಎಂದು ಪ್ರಗತಿಪರ ರೈತ ಅಶೋಕ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ರೈತರು ಸಂಘಟಿರಾಗಿದ್ದು ಯಾವುದೇ ಕಾರಣಕ್ಕೂ ಒಂದಿಂಚು ಭೂಮಿಯಲ್ಲ ಒಂದಿಡಿ ಮಣ್ಣನ್ನು ಸಹ ಕೆಐಎಡಿಬಿಗೆ ನೀಡುವುದಿಲ್ಲ. ರೈತರು ತಾಳ್ಮೆಯಿಂದ ಹೋರಾಟ ನಡೆಸುತ್ತಿದ್ದು ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.