ಕನ್ನಡದಲ್ಲಿ 125ಕ್ಕೆ 125 ಅಂಕ
ಅತ್ಯಂತ ಮುದ್ದಾಗಿ ತಪ್ಪಿಲ್ಲದೆ ಕನ್ನಡ ಬರೆಯುವ ಗರೀಮಾ ಕುಮಾರಿ ಅಷ್ಟೇ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾಳೆ. ಆಕೆಯೆ ಕನ್ನಡ ಪ್ರೇಮ ಯಾವ ರೀತಿಯಾಗಿತ್ತು ಅಂದರೆ 10ನೇ ತರಗತಿಯಲ್ಲಿ ಓದುವಾಗ ಊರಿಗೆ (ಬಿಹಾರ) ಹೋಗುವ ಅನಿವಾರ್ಯವಾದಾಗ ಒಂದು ತಿಂಗಳು ಶಾಲೆಗೆ ರಜೆ ಕೇಳಿದರು. ಅಲ್ಲಿಗೆ ಹೋದರೆ ಮತ್ತೆ ಕನ್ನಡ ಓದುವುದು ಬರೆಯುವುದು ಮರೆತು ಹೋದರೆ ಎಂದು ಪ್ರಶ್ನಿಸಿದ್ದಕ್ಕೆ ‘ಪುಸ್ತಕಗಳನ್ನು ನನ್ನೊಂದಿಗೆ ಕೊಂಡೊಯ್ದು ಓದಿಕೊಳ್ಳುತ್ತೇನೆ ಅಂದಳು’. ಕೊಟ್ಟ ಮಾತಿನಂತೆ ನಮ್ಮ ಶಾಲೆಗೆ ಅತಿ ಹೆಚ್ಚು (598) ಅಂಕ ಪಡೆದ ಎರಡನೇ ವಿದ್ಯಾರ್ಥಿನಿ ಗರೀಮಾ ಕುಮಾರಿ. ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿರುವುದು ಹೆಮ್ಮೆಯ ಸಂಗತಿ. ಆರ್.ನಾರಾಯಣಸ್ವಾಮಿ ಮುಖ್ಯಶಿಕ್ಷಕ(ಈಗ ಬಿಆರ್‌ರ್)ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆ