ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: 42 ನಾಮಪತ್ರ ಸಲ್ಲಿಕೆ

ಶಿಕ್ಷಕರ ಸಂಘದ ಚುನಾವಣೆ
Last Updated 10 ಡಿಸೆಂಬರ್ 2020, 5:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಹಲವು ಅಡೆತಡೆಗಳ ನಿವಾರಣೆ ನಂತರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಡಿ. 15ರಂದು ಬೆಳಿಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಚಿಕ್ಕನರಸಿಂಹಯ್ಯ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ 937 ಪ್ರಾಥಮಿಕ ಶಾಲಾ ಶಿಕ್ಷಕರು ಇದ್ದಾರೆ. ಎಲ್ಲರೂ ಮತದಾನದ ಹಕ್ಕು ಹೊಂದಿದ್ದಾರೆ. 19 ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ 13 ಸ್ಥಾನಗಳು ಸಾಮಾನ್ಯ ಹಾಗೂ 6 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ನಾಮಪತ್ರ ಹಿಂದಕ್ಕೆ ಪಡೆಯಲು ಡಿ. 10ರಂದು ಸಂಜೆ 4 ಗಂಟೆವರೆಗೆ ಅವಕಾಶ ನೀಡಲಾಗಿದೆ.
ಡಿ. 15ರಂದು ಸಂಜೆ 4ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತ ಎಣಿಕೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಬುಧವಾರ 43 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಒಬ್ಬರು ನಾಮಪತ್ರವನ್ನು ಇಂದೇ ವಾಪಸ್‌ ಪಡೆದಿದ್ದಾರೆ. 12 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಗುರುವಾರ ಸಂಜೆವರೆಗೂ ಅವಕಾಶ ಇದೆ.

ಮತಯಾಚನೆ ಆರಂಭ:ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಎರಡು ಸಿಂಡಿಕೇಟ್‌ಗಳಾಗಿ ಚುನಾವಣೆ
ಎದುರಿಸಲಾಗುತ್ತಿದೆ.

ಜೈಕುಮಾರ್‌ ಹಾಗೂ ಬಿ.ಎಸ್‌. ಸಿದ್ದಗಂಗಯ್ಯ, ಮಲ್ಲಿಕಾರ್ಜುನರೆಡ್ಡಿ ಸಿಂಡಿಕೇಟ್. ಐದು ವರ್ಷಗಳಿಂದಲೂ ಬಿ.ಎಸ್‌. ಸಿದ್ದಗಂಗಯ್ಯ ಅಧ್ಯಕ್ಷರಾಗಿ, ಜೈಕುಮಾರ್‌ ಕಾರ್ಯದರ್ಶಿಯಾಗಿ ಆಡಳಿತ ನಿರ್ವಹಿಸಿದ್ದರು. ಆದರೆ, ಈಗ ಇಬ್ಬರ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಸಿಂಡಿಕೇಟ್‌ ಹೊರತಾಗಿಯೂ ಕೆಲವರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT