ಸೋಮವಾರ, ಅಕ್ಟೋಬರ್ 26, 2020
20 °C
ರೋಟರಿ ಶಾಲಾ ಸಭಾಂಗಣದಲ್ಲಿ ರೋಟರಿ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ಸಮಾಜ ಪರಿವರ್ತನೆಗೆ ಶಿಕ್ಷಕರ ಪಾತ್ರ ಮುಖ್ಯ: ಗೋಪಾಲರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸಮಾಜದ ಪರಿವರ್ತನೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಶಿಕ್ಷಕ ಧರ್ಮವನ್ನು ಪಾಲನೆ ಮಾಡಿಕೊಂಡು ಹೋಗುವ ಕಡೆಗೆ ಶಿಕ್ಷಕರು ಮನಸ್ಸು ಮಾಡಬೇಕು’ ಎಂದು ಬೆಂಗಳೂರು ರೋಟರಿ ಜಿಲ್ಲಾ ಕೋಲಾರ ಸುವರ್ಣನಾಡು ಸಹಾಯಕ ಗವರ್ನರ್ ಗೋಪಾಲರೆಡ್ಡಿ ತಿಳಿಸಿದರು.

ಇಲ್ಲಿನ ರೋಟರಿ ಶಾಲಾ ಸಭಾಂಗಣದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕರಿಗೆ ‘ನೇಷನ್‌ ಬಿಲ್ಡರ್’‌ ಪ್ರಶಸ್ತಿ ಪ್ರದಾನ, ರೊಟೇರಿಯನ್ ಶಿಕ್ಷಕರಿಗೆ ಅಂತರರಾಷ್ಟ್ರೀಯ ರೋಟರಿಯಿಂದ ಪ್ರಶಂಸಾ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡವರು ನಿಷ್ಠೆ, ಪ್ರಾಮಾಣಿಕತೆ, ನಿರಂತರ ಅಧ್ಯಯನ ಮಾಡಬೇಕು. ಶಿಕ್ಷಕರು ಕೇವಲ ಪಾಠಪ್ರವಚನಗಳನ್ನು ಬೋಧನೆ ಮಾಡಲು ಸೀಮಿತವಾಗಬಾರದು. ನಮ್ಮ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಕಾಳಜಿ ವಹಿಸಬೇಕು. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವ ಶಕ್ತಿ ಶಿಕ್ಷಕರಲ್ಲಿದೆ’ ಎಂದರು.

ರೋಟರಿ ಅಧ್ಯಕ್ಷ ಚ.ವಿಜಯಬಾಬು, ಜಿಲ್ಲಾ ಪಲ್ಸ್‌ಪೋಲಿಯೋ ಸಮಿತಿ ಅಧ್ಯಕ್ಷ ಎಸ್.ಬಸವರಾಜ್ ಮಾತನಾಡಿದರು.

ಚನ್ನರಾಯಪಟ್ಟಣ ಶಾಲೆಯ ಶಿಕ್ಷಕ ಎ.ಎಂ.ನಾರಾಯಣಸ್ವಾಮಿ, ಗುರಪ್ಪನಮಠ ಪೂರ್ವ ಶಾಲೆಯ ಶಿಕ್ಷಕಿ ಎಚ್.ಇ.ಕಲಾವತಿ, ವೆಂಕಟೇನಹಳ್ಳಿ ಶಾಲೆಯ ಶಿಕ್ಷಕಿ ವಿ.ಉಮಾದೇವಿ, ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಆರತಿ ಪತ್ತಾರ, ಎ.ಫಯಾಜ್‌ ಪಾಷಾ ಅವರನ್ನು ನೇಷನ್‌ ಬಿಲ್ಡರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೊಟೇರಿಯನ್ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಬಿ.ವಿನಯ್‌ ಕುಮಾರ್‌ ಅವರಿಗೆ ಅಂತರರಾಷ್ಟ್ರೀಯ ರೋಟರಿ ವತಿಯಿಂದ ಪ್ರಶಂಸಾಪತ್ರ ನೀಡಲಾಯಿತು. ರೋಟರಿ ಅಸಿಸ್ಟೆಂಟ್ ಗವರ್ನರ್ ಎಸ್.ಶೈಲೇಂದ್ರಕುಮಾರ್, ಟೀಚ್‌ ಮಿಷನ್‌ ನಿರ್ದೇಶಕ ಬಿ.ವಿನಯ್‌ ಕುಮಾರ್, ಕಾರ್ಯದರ್ಶಿ ಬಿ.ಕೆ.ರಾಜು, ಖಜಾಂಚಿ ಎನ್.ರುದ್ರಮೂರ್ತಿ, ಬಾಬು, ಮಾಜಿ ಅಧ್ಯಕ್ಷ ಎನ್.ಪುಟ್ಟರಾಜು ಬಿ.ಸಿ.ಸಿದ್ಧರಾಜು, ಸಿ.ಸುರೇಶ್, ಬುಲೆಟಿನ್ ಎಡಿಟರ್ ಎಚ್.ಎಸ್.ರುದ್ರೇಶಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು