ದೊಡ್ಡಬಳ್ಳಾಪುರ: ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಅವರು ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನರಸಿಂಹಮೂರ್ತಿ ಅವರ ಮೇಲೆ ಗುರುವಾರ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದ ನಮ್ಮ ಪೂರ್ವಿಕರು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದ ಸ್ಥಳ ಪಾಳು ಬಿದ್ದಿದೆ. ಈ ಸ್ಥಳದಲ್ಲಿ ಈಗ ಅರ್ಧ ಕುಸಿದ ಮನೆಗಳು, ತಿಪ್ಪಿಗುಂಡಿಗಳು ಮಾತ್ರ ಇವೆ. ಆದರೆ ಯಾರಿಗೂ ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ 88 ಅಡಿ ಉದ್ದ, 178 ಅಡಿಗಳಷ್ಟು ಅಗಲದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಪಂಚಾಯಿತಿ ವತಿಯಿಂದಲೇ ಮಂಜೂರಾತಿ ನೀಡಿದ್ದೇವೆ. ಈಗ ಶಾಲೆ ನಿರ್ಮಿಸುತ್ತಿರುವ ಸ್ಥಳದ ಅಂಚಿನಲ್ಲೇ ನಮ್ಮ ಸ್ವಂತ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ಆದರೆ ನಮ್ಮನೆಗೆ ಹೋಗಲು ರಸ್ತೆ ಇಲ್ಲದಂತೆ 10 ಅಡಿಗಳಷ್ಟು ಕಾಲುವೆಗಳನ್ನು ತೋಡಿ ರಸ್ತೆ ಬಂದ್ ಮಾಡಿದ್ದಾರೆ’ ಎಂದು ಎನ್. ನರಸಿಂಹಮೂರ್ತಿ ತಿಳಿಸಿದರು.

‘ಕಾಮಗಾರಿ ಮಾಡುತ್ತಿರುವವರನ್ನು ಈ ಬಗ್ಗೆ ಪ್ರಶ್ನಿಸಿದಾಗ ತೇಜಸ್ವಿನಿ ರಮೇಶ್ ಅವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ಯತ್ನ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದರು.

ಪ್ರಕರಣ ಕುರಿತು ತೇಜಸ್ವಿನಿ ಅವರಿಂದ ಪ್ರತಿಕ್ರಿಯೆ ಪಡೆಯಲು ಅವರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.