ರಸ್ತೆ ಬದಿ ಬಸ್ ಇಳಿದು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಪರದಾಡುತ್ತಿರುವ ಸಾರ್ವಜನಿಕರು
ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿರುವ ಪ್ರಯಾಣಿಕರು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಪಾದಚಾರಿ ಮಾರ್ಗವೇ ಬಸ್ ನಿಲ್ದಾಣ!
38 ಗುಂಟೆ ಜಾಗ ಮೀಸಲು
ಅತ್ತಿಬೆಲೆ ವೃತ್ತದ ಪಕ್ಕದಲ್ಲಿಯೇ 38 ಗುಂಟೆ ಖಾಲಿ ಜಾಗ ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಈ ಜಾಗವನ್ನು ಹಲವು ಹರ್ಷಗಳಿಂದ ಖಾಲಿ ಬಿಟ್ಟಿದೆ. ಇಲ್ಲಿ ಗಿಡಗೆಂಟಿಗಳು ಬೆಳೆದು ನಿಂತಿವೆ. ಅತ್ತಿಬೆಲೆ ಬಸ್ ನಿಲ್ದಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೆಎಸ್‌ಆರ್‌ಟಿಸಿಗೆ ಮಂಜೂರಾಗಿದ್ದ ಜಾಗವನ್ನು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಜಂಟಿಯಾಗಿ ಬಳಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ. ತ್ವರಿತವಾಗಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬಸ್‌ಗಾಗಿ ಕಾಯುತ್ತಿರುವ ಯುವಕರು
ಹೆಚ್ಚಾದ ವಾಹನ ದಟ್ಟಣೆ
ಬೆಂಗಳೂರಿನ ಮೆಜೆಸ್ಟಿಕ್‌ನಿಂದ 10ಸಾವಿರ ಶೆಡ್ಯೂಲ್ ಬಸ್‌ಗಳ ಓಡಾಟವಿದೆ. ಅತ್ತಿಬೆಲೆಯಲ್ಲಿ 3ಸಾವಿರ ಶೆಡ್ಯೂಲ್ ಬಿಎಂಟಿಸಿ ಬಸ್‌ಗಳ ಓಡಾಟವಿದೆ. ಬೆಂಗಳೂರು ಹೊರತು ಪಡಿಸಿ ಅತ್ತಿಬೆಲೆಯೇ ಅತ್ಯಂತ ಹೆಚ್ಚು ಬಸ್‌ಗಳ ಓಡಾಟವಿರುವ ಸ್ಥಳವಾಗಿದೆ. ಅತ್ತಿಬೆಲೆಯಲ್ಲಿ ಬಸ್‌ಗಳಿಗೆ ನಿಲ್ದಾಣ ಇಲ್ಲದೇ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತವೆ. ಪ್ರತಿದಿನ ಅತ್ತಿಬೆಲೆಗೆ ಬರುವ ಬಿಎಂಟಿಸಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಬಸ್‌ನಿಲ್ದಾಣ ಇಲ್ಲದೇ ರಸ್ತೆಯುದ್ದಕ್ಕೂ ನಿಂತುಕೊಳ್ಳುತ್ತವೆ. ಇದರಿಂದ ರಸ್ತೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.
ಪರದಾಟ ತಪ್ಪಿಸಿ
ಅತ್ತಿಬೆಲೆಯಲ್ಲಿ ಹೆಚ್ಚು ಬಸ್‌ಗಳ ಸಂಚಾರವಿದ್ದರೂ ಬಸ್ ನಿಲ್ದಾಣ ಇಲ್ಲ. ಇದರಿಂದ ರಸ್ತೆ ಬದಿಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ವಿಚಕ್ರ ವಾಹನಗಳ ಸವಾರರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಿ ಬಸ್ ನಿಲ್ದಾಣ ಮಂಜೂರು ಮಾಡಬೇಕು- ಸಂಪತ್ ಚಿಕ್ಕನಹಳ್ಳಿ ನಿವಾಸಿ
ಕೂಡಲೇ ಕ್ರಮವಹಿಸಿ
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಒಂದೇ ಸೂರಿನಡಿ ಬಸ್ ನಿಲ್ದಾಣಕ್ಕೆ ಜಾಗದ ವ್ಯವಸ್ಥೆ ಮಾಡಬೇಕು. ಅತ್ತಿಬೆಲೆಗೆ ಬಸ್ ನಿಲ್ದಾಣದ ಅವಶ್ಯಕತೆ ಅತ್ಯಂತ ಹೆಚ್ಚಾಗಿದೆ. ಸರ್ಕಾರ ಕೂಡಲೇ ಕ್ರಮ ವಹಿಸಬೇಕು -ತಿಮ್ಮರಾಜು ಅತ್ತಿಬೆಲೆ ನಿವಾಸಿ