ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ | ಹುಲಿಕುಂಟೆ ಪ್ಲಾಜಾ: ಟೋಲ್‌ ಸಂಗ್ರಹ ಆರಂಭ

ದಾಬಸ್ ಪೇಟೆ–ಹೊಸಕೋಟೆ– ದೊಡ್ಡಬಳ್ಳಾಪುರ ರಸ್ತೆ ಪೂರ್ಣ: ಸ್ಥಳೀಯ ವಾಹನಕ್ಕೂ ಶುಲ್ಕ– ಗ್ರಾಮಸ್ಥರ ವಿರೋಧ 
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದಾಬಸ್‌ಪೇಟೆ– ಹೊಸಕೋಟೆ–ದೊಡ್ಡಬಳ್ಳಾಪುರ ಉಪನಗರದ ಹೊರವರ್ತುಲ ರಸ್ತೆ ಪೂರ್ಣಗೊಂಡಿದ್ದು ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಜೂನ್‌ 14ರಿಂದ ಟೋಲ್‌ ಸಂಗ್ರಹ ಆರಂಭವಾಗಿದೆ.

ದ್ವಿಚಕ್ರ ವಾಹನಗಳಿಗೆ ಮಾತ್ರ ಸುಂಕ ವಸೂಲಾತಿಯಿಂದ ವಿನಾಯತಿ ನೀಡಲಾಗಿದೆ. ಆದರೆ, ಸ್ಥಳೀಯರ ವಾಹನಗಳಿಗೂ ಶುಲ್ಕ ವಿಧಿಸಿರುವುದು ಹುಲಿಕುಂಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜೂನ್ 14 ರಿಂದ ಎಲ್ಲ ರೀತಿಯ ಖಾಸಗಿ ಮತ್ತು ವಾಣಿಜ್ಯ ವಾಹನಗಳು ದರಪಟ್ಟಿ ಪ್ರಕಾರ ಸುಂಕ ಪಾವತಿಸುತ್ತಿವೆ ಎಂದು ಹೇಳಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರಪಟ್ಟಿಯನ್ನು ಸಹ ಪ್ರಕಟಿಸಿದೆ.

ದಿನದ 24 ಗಂಟೆಯಲ್ಲಿ ಕಾರಿನ ಒಂದು ಕಡೆ ಸಂಚಾರಕ್ಕೆ ₹105, ಮತ್ತೆ ವಾಪಸ್ ಬರಲು ₹155 ಮಾಸಿಕ ಪಾಸ್​ನಲ್ಲಿ 50 ಬಾರಿ ಒಂದು ಪ್ರಯಾಣಕ್ಕೆ ಅವಕಾಶ ಇದ್ದು, ₹3,470 ನಿಗದಿ ಮಾಡಲಾಗಿದೆ. ಅಲ್ಲದೇ ಭಾರಿ ವಾಹನ ಸೇರಿದಂತೆ ವಿವಿಧ ವಾಹನಗಳಿಗೆ ಬೇರೆ ಬೇರೆ ಶುಲ್ಕ ನಿಗದಿಪಡಿಸಿದೆ.

ಹುಲಿಕುಂಟೆ ಟೋಲ್‌ ಪ್ಲಾಜಾ ಮಾನವರಹಿತವಾಗಿದ್ದು, ಫಾಸ್ಟ್ಯಾಗ್‌ ಇದ್ದರಷ್ಟೆ ಟೋಲ್‌ ಪ್ರವೇಶ. ಇಲ್ಲವಾದರೆ ಟೋಲ್‌ ಅಂಚಿನಲ್ಲಿ ಇರುವ ರಸ್ತೆ ಮೂಲಕ ದುಪ್ಪಟ್ಟು ಶುಲ್ಕ ಪಾವತಿಸಿ ಹೋಗಬೇಕಿದೆ.

ಹುಲಿಕಂಟೆ ಟೋಲ್‌ ಫ್ಲಾಜಾದಲ್ಲಿ ಶುಲ್ಕ ಸಂಗ್ರಹ ಪ್ರಾರಂಭವಾಗುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಪ್ರವೇಶ ಮಾಡುವ ನಾಲ್ಕು ದಿಕ್ಕುಗಳಲ್ಲೂ ಸಹ ವಾಹನ ಮಾಲೀಕರು ಶುಲ್ಕ ಪಾವತಿಸಿಯೇ ಒಳಗೆ ಬರುವಂತಾಗಿದೆ.

ಉಪನಗರ ಹೊರವರ್ತುಲ ರಸ್ತೆ ಯೋಜನೆಯಡಿ ಟೋಲ್ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ ನೆಲ್ಲೂರು-ದೇವನಹಳ್ಳಿಯ 34.15 ಕಿ.ಮೀ ಟೋಲ್ ಸುಂಕ ಸಂಗ್ರಹ 2023ರ ನವೆಂಬರ್‌ನಿಂದ ಆರಂಭವಾಗಿದೆ.

ಬೆಂಗಳೂರು ನಗರಕ್ಕೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕಾರಣಕ್ಕೆ ಉಪನಗರದ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ 101 ಕಿ.ಮೀ ದಾಬಸ್​ಪೇಟ್-ಹೊಸಕೋಟೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಒಂದು ಕಡೆ ಟೋಲ್ ಸುಂಕ ಸಂಗ್ರಹ ಆರಂಭವಾಗಿದೆ. ಜೂನ್ 14ರಿಂದ ಎರಡನೇ ಟೋಲ್​​ ಬೂತ್‌ನಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ.

ಡಾಬಸ್‌ಪೇಟೆ - ದೊಡ್ಡಬಳ್ಳಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾದ ಬಳಿಕ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಬರುವ ಭಾರಿ ವಾಹನಗಳ ಪ್ರಮಾಣ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ. 

ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿನ  ಹುಲಿಕುಂಟೆ ಟೋಲ್‌ ಫ್ಲಾಜಾ
ದೊಡ್ಡಬಳ್ಳಾಪುರ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿನ  ಹುಲಿಕುಂಟೆ ಟೋಲ್‌ ಫ್ಲಾಜಾ
ಹುಲಿಕುಂಟೆ ಟೋಲ್‌ ಪ್ಲಾಜಾ ದರ ಪಟ್ಟಿ ಫಲಕ
ಹುಲಿಕುಂಟೆ ಟೋಲ್‌ ಪ್ಲಾಜಾ ದರ ಪಟ್ಟಿ ಫಲಕ

ವಿನಾಯಿತಿ ನೀಡದ್ದರೆ ಪ್ರತಿಭಟನೆ

ತೋಟಕ್ಕೆ ಹೋಗಿ ಬರಲು ಸಹ ಟೋಲ್‌ ಶುಲ್ಕ ಪಾವತಿಸಿ ಹೋಗುವ ಸ್ಥಿತಿ ಉಂಟಾಗಿದೆ. ನಮ್ಮೂರಿನಲ್ಲೇ ಇರವ ಟೋಲ್‌ಗೆ ನಾವು ಶುಲ್ಕ ಪಾವತಿಸಬೇಕು ಅನ್ನುವುದು ಎಷ್ಟರಮಟ್ಟಿಗೆ ಸರಿ? ಸ್ಥಳೀಯರು ಎನ್ನುವುದಕ್ಕೆ ಖಾತರಿಯಾಗಿ ಆಧಾರ್‌ ಕಾರ್ಡ್‌ ತೋರಿಸಿದರೂ ಬಿಡುತ್ತಿಲ್ಲ. ಸ್ಥಳೀಯರಿಗೆ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡದೆ ಇದ್ದರೆ ಪ್ರತಿಭಟನೆ ನಿವಾರ್ಯವಾಗಲಿದೆ. ಜಿ.ವೆಂಕಟೇಶ್‌ ಹುಲಿಕುಂಟೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT