ಮುಖ್ಯಮಂತ್ರಿ ಪರಿಹಾರ ನಿಧಿಗೆ₹ 2 ಕೋಟಿ ನೀಡಿದ ಅಣ್ಣೇಶ್ವರ ಗ್ರಾ.ಪಂ

ದೇವನಹಳ್ಳಿ: ಮುಖ್ಯಮಂತ್ರಿ ಪರಿಹಾರ ನಿಧಿಗೆ ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವತಿಯಿಂದ ₹ 2 ಕೋಟಿ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮುರುಳಿ ಹೇಳಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಚೆಕ್ ನೀಡಲಾಗಿದೆ ಎಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಶಿವಣ್ಣ ಮಾತನಾಡಿ, ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಳ ಮತ್ತು ಹೊರಗೆ ಜಾಹೀರಾತು ಫಲಕ ಮತ್ತು ಇತರ ತೆರಿಗೆ ಬಾಕಿ ₹ 50 ಕೋಟಿ ಇದೆ. ವಿವಿಧ ಕಂಪನಿಗಳು ತೆರಿಗೆ ನೀಡುತ್ತಿಲ್ಲ. ತೆರಿಗೆ ಹಣ ಸಕಾಲದಲ್ಲಿ ಬಂದಿದ್ದರೆ ಒಳ ಚರಂಡಿ ದುರಸ್ತಿಗೊಳಿಸುವ ಉದ್ದೇಶವನ್ನು ಪಂಚಾಯಿತಿ ಹೊಂದಿತ್ತು ಎಂದು ತಿಳಿಸಿದರು. ಪಿಡಿಒ ವೆಂಕಟೇಶ್ ಇನಾಂದಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.