ತೂಬಗೆರೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಕಾರನಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಕ್ಷಿಸಲು ಹೋದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಸಂಜಯ್(43),ಲಲಿತಮ್ಮ(50)ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಲಕ್ಷ್ಮಮ್ಮ(45) ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಕಂಬದಿಂದ ನಿರ್ಮಾಣ ಹಂತದ ಮನೆಗೆ ಎಳೆದೊಕೊಂಡಿದ್ದ ವಿದ್ಯುತ್ ತಂತಿ ಸಮೀಪವೇ ಒಣ ಹಾಕಿದ್ದ ಬಟ್ಟೆ ತೆಗೆದುಕೊಳ್ಳಲು ಹೋದ ಲಲಿತಮ್ಮ ಅವರಿಗೆ ವಿದ್ಯುತ್ ತಂತಿ ತಗುಲಿ ಒದ್ದಾಡಲು ಆರಂಭಿಸಿದರು. ಇದನ್ನು ನೋಡಿ ರಕ್ಷಿಸಲು ಹೋದ ಸಂಜಯ್ ಅವರಿಗೂ ವಿದ್ಯುತ್ ತಗುಲಿದೆ.ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಇಬ್ಬರನ್ನೂ ರಕ್ಷಿಸಲು ಮುಂದಾದ ಲಕ್ಷ್ಮಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಪ್ರಾಣಾಪಾಯದಿಂದ ಪರಾಗಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು,ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.