‘ಬಹುತ್ವ ಭಾರತದಲ್ಲಿ ಏಕ ಸಂಸ್ಕೃತಿ ಅಸಾಧ್ಯ’
ಇದು ಬಹುತ್ವ ಭಾರತ. ಇಲ್ಲಿ ಒಂದು ಭಾಷೆ ಒಂದು ಶಿಕ್ಷಣ ನೀತಿ ಅಸಾಧ್ಯ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ಉತ್ತರ ದಕ್ಷಿಣದಲ್ಲಿ ಯಾವುದೂ ಶ್ರೇಷ್ಠವಲ್ಲ ಯಾವುದೂ ಕನಿಷ್ಠವೂ ಅಲ್ಲ. ಎಲ್ಲವೂ ಸಮಾನ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿ ಬಾಗಿ ಹೇಳಿದರು. ಯಾವುದೇ ಒಂದು ರಾಜ್ಯದ ಚುನಾಯಿತ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದು ಆಡಳಿತ ನಡೆಸುವಾಗ ಸರ್ಕಾರ ಪತನವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳುವುದೇ ತಪ್ಪು. ಕೇಂದ್ರ ಸರ್ಕಾರದ ಬಜೆಟ್ ಮೊತ್ತ ದೊಡ್ಡದಾಗಿರುವಂತೆ ರಾಜ್ಯಗಳಿಗೆ ಬರುವ ಅನುದಾನವು ಹೆಚ್ಚಾಗಬೇಕು ಎಂದರು.