ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ: ಮಳಿಗೆಗಳಿಂದ ಬಾಕಿ ವಸೂಲಿ, ₹1.20 ಲಕ್ಷ ತೆರಿಗೆ ಸಂಗ್ರಹ

Published 9 ಫೆಬ್ರುವರಿ 2024, 13:04 IST
Last Updated 9 ಫೆಬ್ರುವರಿ 2024, 13:04 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಳ್ಳಿಗಳಲ್ಲಿ ವಾಣಿಜ್ಯ ತೆರಿಗೆ ಪಾವತಿಸದ ಮಳಿಗೆಗಳ ವಿರುದ್ಧ ಬುಧವಾರ ಬಾಕಿ ವಸೂಲಿ ಕಾರ್ಯಾಚರಣೆ ನಡೆಸಿ, ₹1.20 ಲಕ್ಷ ತೆರಿಗೆ ಸಂಗ್ರಹಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ಬುಳ್ಳಹಳ್ಳಿ ಗೇಟ್‌ನಲ್ಲಿರುವ ಡಾಬಾ ಹಾಗೂ ಮಳಿಗೆಗಳಿಗೆ ಪಂಚಾಯಿತಿಯಿಂದ ಪರವಾನಗಿ ಪಡೆಯದೇ ತೆರಿಗೆ ವಂಚಿಸಿದ್ದ ಮಳಿಗೆಗಳ ಮಾಲೀಕರಿಗೆ ಮೂರು ಬಾರಿ ನೊಟೀಸ್ ನೀಡಿದ್ದರೂ, ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್, ಉಪಾಧ್ಯಕ್ಷ ಮನೋಹರ್, ಸೇರಿದಂತೆ ಸದಸ್ಯರೊಟ್ಟಿಗೆ ಪೊಲೀಸರೊಂದಿಗೆ ತೆರಳಿ, ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಬಾಕಿ ಉಳಿಸಿಕೊಂಡಿದ್ದ ₹1.20 ಲಕ್ಷ ತೆರಿಗೆ ವಸೂಲಿ ಮಾಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಜಿ. ಸೌಮ್ಯ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳಾದ ಶುದ್ಧಕುಡಿಯುವ ನೀರು, ಬೀದಿದೀಪ, ಚರಂಡಿ ವ್ಯವಸ್ಥೆ, ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕಾದರೆ, ಸಂಪನ್ಮೂಲ ಕ್ರೋಢಿಕರಣ ಮುಖ್ಯವಾಗುತ್ತದೆ. ಹೀಗಾಗಿ ವಾಣಿಜ್ಯ ಮಳಿಗೆಗಳು ತಪ್ಪದೆ ತೆರಿಗೆ ಪಾವತಿಸಬೇಕು ಎಂದು ಹೇಳಿದರು.

ಮಳಿಗೆದಾರರಿಗೆ ನೋಟಿಸ್‌ ನೀಡಿದ್ದರೂ ಸಹ ಸ್ಪಂದಿಸದ ಕಾರಣ ಪೊಲೀಸರೊಂದಿಗೆ ತೆರಳಿ ತೆರಿಗೆ ವಸೂಲಿ ಮಾಡಬೇಕಾಯಿತು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಬುಳ್ಳಹಳ್ಳಿ ಮಂಜುಳಮ್ಮ, ಹಾರೋಹಳ್ಳಿ ಮಂಜುಳಮ್ಮ, ಕಾರ್ಯದರ್ಶಿ ರಾಜೇಶ್, ಕರವಸೂಲಿಗಾರ ಮುನಿಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT