ಮಾಗಡಿ: ವಿಶ್ವಕರ್ಮ ಮಹರ್ಷಿ ಎಲ್ಲದರ ಕರ್ತೃ. ಋಗ್ವೇದದ ಪ್ರಕಾರ ಸೃಷ್ಟಿ ದೇವರು ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬ್ರಿಗ್ರೇಡ್ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.

ಕಾಳಿಕಾಂಬ ದೇವಾಲಯದ ಸಮಿತಿ ಅಧ್ಯಕ್ಷ ಶಾಮಾಚಾರ್ ಮಾತನಾಡಿ, ದೇವಲೋಕದ ವಾಸ್ತುಶಿಲ್ಪಿ ವಿಶ್ವಕರ್ಮ ಮಹರ್ಷಿ ಸೃಷ್ಟಿಕರ್ತರಾಗಿದ್ದರು. ಆಧುನಿಕ ಯುಗದಲ್ಲಿ ವಿಶ್ವಕರ್ಮ ಸಮಾಜ ಕಡುಬಡತನದಲ್ಲಿ ಜೀವಿಸುತ್ತಿದೆ. ಸರ್ಕಾರ ಸಮುದಾಯದ ಕಡುಬಡವರಿಗೆ ಸವಲತ್ತು ನೀಡಬೇಕು ಎಂದರು.

ದೇವಾಲಯ ಸಮಿತಿ ಉಪಾಧ್ಯಕ್ಷ ರಂಗನಾಥಚಾರ್, ಕಾರ್ಯದರ್ಶಿ ದಯಾನಂದಚಾರ್, ಖಜಾಂಚಿ ಕೃಷ್ಣಾಚಾರ್, ಬ್ರಿಗೇಡ್ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಎಂ.ಜಿ.ಮಂಜುನಾಥ್, ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ನಾಗೇಂದ್ರ, ಮುನಿರಾಜು, ಮುಖಂಡರಾದ ಮಲ್ಲೇಶ್, ಲೋಕೇಶ್, ಸುರೇಶ್, ನರಸಿಂಹಮೂರ್ತಿ, ಪ್ರಕಾಶ್, ತೇಜುಮೂರ್ತಿ ಮಾತನಾಡಿದರು.

ಕಾಳಿಕಾಂಬ ದೇವಾಲಯದ ಪ್ರಧಾನ ಅರ್ಚಕ ನರಸಿಂಹಮೂರ್ತಿ ಆಚಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.