ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಪಿಐನಿಂದ ಮಹಿಳಾ ಸಬಲೀಕರಣ ಅಭಿಯಾನ

Last Updated 12 ಫೆಬ್ರವರಿ 2023, 4:42 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸ್ವಸ್ಥ, ಸಧೃಡ ಸಮಾಜ ನಿರ್ಮಾಣಕ್ಕಾಗಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಮನತೆ ಸಾಧಿಸಬೇಕು. ಸಂವಿಧಾನದ ಆಶಯದಂತೆ ಜಾತೀಯತೆ ಮರೆಯಾಗಿ ಸಮಾನತೆ ಕಾಣಲು ಮಹಿಳಾ ಸಬಲೀಕರಣ ಅಭಿಯಾನ ಆರಂಭಿಸಿದ್ದೇವೆ’ ಎಂದು ರಿಪಬ್ಲಿಕ್‌ ಪಾರ್ಟ್‌ ಆಫ್‌ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಡಾ.ವೆಂಕಟಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಒಂದು ದಿನದ ಮಹಿಳಾ ಸಬಲೀಕರಣ ಅಭಿಯಾನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದ ಪೂರ್ಣ ಪ್ರಮಾಣದಲ್ಲಿ ಬೌದ್ಧಿಕ ಅಭಿವೃದ್ಧಿಗಾಗಿ ಸ್ತ್ರೀ ಸಮುದಾಯದ ಬಲವರ್ಧನೆ ಮಾಡುವ ಅಗತ್ಯತೆ ಇದೆ. ಇದನ್ನೇ ಅಂಬೇಡ್ಕರ್‌, ಜ್ಯೋತಿ ಬಾ ಫುಲೆ ಪ್ರತಿಪಾದಿಸಿದ್ದರು’ ಎಂದು ಹೇಳಿದರು.

‘ಬಾಬಾ ಸಾಹೇಬರು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರು ರಚಿಸಿದ ಸಂವಿಧಾನದ ಮೂಲ ಆಶಯಗಳ ಉಳಿವಿಗಾಗಿ ನ್ಯಾಯ, ಸ್ವಾಭಿಮಾನ, ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ತತ್ವವನ್ನು ಎಲ್ಲೆಡೆ ಪಸರಿಸಿ ಅಳವಿಡಿಸಕೊಳ್ಳಬೇಕಿದೆ’ ಎಂದರು.

‘ಬುದ್ಧ, ಬಸವಣ್ಣ ಅವರ ಮಾರ್ಗದಲ್ಲಿ ಸಮ ಸಮಾಜ ನಿರ್ಮಾಣದ ಕನಸ್ಸು ಹೊತ್ತಿಕೊಂಡು ಮಹಿಳಾ ಸಬಲೀಕರಣ ಅಭಿಯಾನ ಪ್ರಾರಂಭಿಸಿದ್ದೇವೆ. ಅಬಲೆಯನ್ನು ಸಬಲೆಯನ್ನಾಗಿಸಿ, ಹಳ್ಳಿಯಿಂದ ದೆಹಲಿಯವರೆಗೂ ಮಹಿಳಾ ಶಕ್ತಿ ನಿರೂಪಣೆಗೆ ಸುಸಂದರ್ಭ ಇದಾಗಿದೆ’ ಎಂದು ಹೇಳಿದರು.

'ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಮತ್ತಷ್ಟು ತೊಡಗಿಸಿಕೊಂಡು ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಟ ಮಾಡುವ ಅಗತ್ಯತೆ ಇದೆ’ ಎಂದು ಪಕ್ಷದ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅನುರಾಧ ಅಶೋಕ್‌ ಹೇಳಿದರು.

‘ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗ್ರಾಮೀಣ ಭಾಗದ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದ್ದೇವೆ. ಅವಕಾಶಗಳ ಬಗ್ಗೆ ಮಾಹಿತಿ ನೀಡಿ ಬೌದ್ಧಿಕ, ಆರ್ಥಿಕ ಸಾಕ್ಷರತೆಗೆ ಶ್ರಮಿಸುತ್ತೇವೆ’ ಎಂದರು.

ಉದ್ದಿಮೆ ಮತ್ತು ಮಾಧ್ಯಮ ರಾಜ್ಯ ಘಟಕ ಅಧ್ಯಕ್ಷೆ ಡಾ.ರಾಜಶ್ರೀ, ಸಿನಿಮಾ ನಿರ್ಮಾಪಕಿ ಸಚ್ಚಿಲಕ್ಷ್ಮೀ, ಪ್ರಾಧ್ಯಾಪಕಿ ಡಾ.ಸುಮಿತ್ರಾ, ಗೌತಮ್, ಸುರೇಶ್, ಕಾಮಾಕ್ಷಿ, ರಾಧಮ್ಮ ಮುನಿರಾಜು, ಮಮತಾ ಲೋಕೇಶ್, ಸುರೇಶ್, ಮುರುಳಿ, ವೆಂಕಟೇಶ್, ರೋಷನ್, ಮೈತ್ರಿ ಅನೇಕ ಮಹಿಳೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT