‘ಯುವ ಜನತೆ ದುಶ್ಚಟಕ್ಕೆ ಬಲಿಯಾಗದಿರಿ’

7
ಜೇಸಿಐ ಸಂಸ್ಥೆ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ

‘ಯುವ ಜನತೆ ದುಶ್ಚಟಕ್ಕೆ ಬಲಿಯಾಗದಿರಿ’

Published:
Updated:
Deccan Herald

ದೇವನಹಳ್ಳಿ: ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯವಿರುವುದಿಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ನಗರೇಶ್ವರ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಜೇಸಿಐ ಸಂಸ್ಥೆ ವತಿಯಿಂದ ನಡೆದ 17ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಯಿಂದ ಕೂಡಿಕೊಂಡು ವಿವಿಧ ರೀತಿಯ ಸಮಾಜ ಸೇವೆಯಲ್ಲಿ ನಿರತರಾದಾಗ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಸಿಗಲಿದೆ. ಚಿಂತನಾಶಕ್ತಿ ಹೊಂದಿರುವ ಮನುಷ್ಯ ಒಳ್ಳೆಯದಕ್ಕೆ ಮಾತ್ರ ಚಿಂತನೆ ನಡೆಸಬೇಕು ಎಂದರು.

ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಭಾವನೆಗಳು ಸಹಜವಾದರು ಸಂಯಮ ತಾಳ್ಮೆ ವಹಿಸಬೇಕಾಗುತ್ತದೆ. ವಿಶಾಲ ಮನೋಭಾವದಿಂದ ಸಮಾಜವನ್ನು ಕಾಣಬೇಕು. ಭವಿಷ್ಯದ ಜೀವನದ ಮಾರ್ಗಕ್ಕೆ ತಮ್ಮದೇ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳವ ಸಂಘ ಸಂಸ್ಥೆಗಳಿಗೆ ಜಾತಿ ಧರ್ಮದ ಕಟ್ಟುಪಾಡುಗಳಿರುವುದಿಲ್ಲ ಎಂಬುದನ್ನು ಕೆಲವು ಸಂಘ ಸಂಸ್ಥೆಗಳು ಪುಷ್ಟೀಕರಿಸುತ್ತವೆ ಎಂದು ತಿಳಿಸಿದರು.

ಇದಕ್ಕೆ ಜೇಸಿಐ ಸಂಸ್ಥೆ ಸಾಕ್ಷಿಯಾಗಿದೆ. ನಿರಂತರವಾಗಿ ಅನೇಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಹತ್ತಾರು ಪ್ರಶಸ್ತಿ ಪುರಸ್ಕಾರ ಪಡೆದಿರುವ ಸಂಸ್ಥೆಯಲ್ಲಿ ಸದಸ್ಯರು, ನಿರ್ದೇಶಕರು, ಅಧ್ಯಕ್ಷರ ಪಾತ್ರ ಪ್ರಂಸಶನೀಯ ಎಂದರು.

ಜೇಸಿಐ 2018ರ ವಲಯ ನಿರ್ದೇಶಕ ಎಂ.ಬಾಬು ಮಾತನಾಡಿ, ಸಂಸ್ಥೆಯಲ್ಲಿ ಯಾವುದೇ ಹಣಕಾಸಿನ ನೆರವಿಲ್ಲದೆ ಪ್ರಾಯೋಜಕರಿಂದ ವಿವಿಧ ರೀತಿಯ ಸೇವಾ ಕಾರ್ಯ ನಡೆಸಲಾಗಿದೆ ಎಂದರು.

ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, 10ನೇ ತರಗತಿಗೆ ವಾರ್ಷಿಕ ಪರೀಕ್ಷೆ ಪೂರ್ವಭಾವಿ ತರಬೇತಿ, ಪರಿಸರ ಸಂರಕ್ಷಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಜೇಸಿಐ ಎಲ್ಲ ಘಟಕದ ಪದಾಧಿಕಾರಿಗಳು ಸಹಕರಿಸಿದ್ದಾರೆ ಎಂದರು.

ನಿಕಟಪೂರ್ವ ಅಧ್ಯಕ್ಷ ಎಸ್.ಪ್ರಭುದೇವ್ ಮಾತನಾಡಿದರು. ಪುರಸಭೆ ಸದಸ್ಯ ಜಿ.ಎ.ರವೀಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !