ವಿಜಯಪುರ(ದೇವನಹಳ್ಳಿ): ಸ್ನೇಹಿತರೊಂದಿಗೆ ಸಾತನೂರು ಬಳಿಯ ಜಲಪಾತಕ್ಕೆ ಈಜಲು ನೀರಿಗೆ ಇಳಿದ ಎಂಜಿನಿಯರಿಂಗ್ ವಿದ್ಯಾರ್ಥಿ, ನಾರಾಯಣಪುರ ಗ್ರಾಮದ ಯುವಕ ಕೆ.ವರುಣ್ (19) ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.

ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ವರುಣ್ ಪಿ.ಜಿ.ಯಲ್ಲಿದ್ದ.

ಯೂಟ್ಯೂಬ್ ನಲ್ಲಿ ಕನಕಪುರ ತಾಲ್ಲೂಕಿನ ಸಾತನೂರು ಬಳಿಯ ಚಿಂಚೂ ಪಾಲ್ಸ್ ವಿಡಿಯೊ ನೋಡಿ, ಅಲ್ಲಿಗೆ ಶುಕ್ರವಾರ ತನ್ನ ಮೂವರು ಸ್ನೇಹಿತರೊಂದಿಗೆ ಪ್ರವಾಸ ತೆರಳಿದ್ದರು.

ಈಜಲು ಹೋಗುವ ವೇಳೆ ಕಾಲು ಜಾರಿ ಬಿದ್ದು ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದ.

ತಕ್ಷಣ ಜೊತೆಯಲ್ಲಿದ್ದ ಸ್ನೇಹಿತರು ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳೀಯ ಪೊಲೀಸರು ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೊಂದಿಗೆ ಶುಕ್ರವಾರದಿಂದ ಹುಡುಕಾಟ ನಡೆಸಿದ್ದು, ಭಾನುವಾರ ಮುಂಜಾನೆ ಮೃತದೇಹ ಪತ್ತೆಯಾಗಿದೆ.

ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.