ಮಂಗಳವಾರ, ಅಕ್ಟೋಬರ್ 20, 2020
22 °C

ಕಾರ್ನಾಡ್ ಜತೆ ಒಡನಾಟವಿರಲಿಲ್ಲ : ಬಸನಗೌಡ ಪಾಟೀಲ ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ‘ಗಿರೀಶ್ ಕಾರ್ನಾಡ್‌ರ ಜತೆ ನನ್ನ ಒಡನಾಟವಿರಲಿಲ್ಲ. ಅವರಿಗಿಂತಲೂ ನಾನು ಬಹಳ ಸಣ್ಣವನು. ಅವರು ಬಹಳ ಹಿರಿಯರು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಸಾಹಿತಿ ಅಲ್ಲ, ಕವಿಯೂ ಅಲ್ಲ. ಸಾಹಿತಿಗಳ ಜತೆ ನಮ್ಮದೇನಿದೆ?. ನಾನೊಬ್ಬ ರಾಜಕಾರಣಿ ಅಷ್ಟೆ’ ಎಂದರು.

‘ಕಾರ್ನಾಡ್‌ರಿಗೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರೆ. ಅವರಂತೆಯೇ ಬಹಳಷ್ಟು ಜನರಿಗೆ ಕೊಟ್ಟಿದ್ದಾರೆ. ದೇಶದ ಬಗ್ಗೆ ಹೆಚ್ಚು ಚಿಂತನೆ ಮಾಡುವವರಿಗೆ ಜ್ಞಾನಪೀಠ ಸಿಗಬೇಕಾಗಿತ್ತು. ಅಂತಹವರು ರಾಜ್ಯದಲ್ಲಿ ಬಹಳ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು